ಹಗರಿಬೊಮ್ಮನಹಳ್ಳಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. 
ವಿಜಯನಗರ

ವಿಕಸಿತ ಭಾರತಕ್ಕೆ ಸಂಕಲ್ಪ ಮಾಡೋಣ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಉನ್ನತ ಧ್ಯೇಯವನ್ನು ಬಿಜೆಪಿ ಹೊಂದಿದೆ. ದೇಶದ ಕೋಟ್ಯಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆ ಹಾಗೂ ಬಲಿದಾನದಿಂದ ಪಕ್ಷ ಬೆಳೆದಿದೆ ಎಂದು ಬಿಜೆಪಿ ನಗರ ಘಟಕದ ಅದ್ಯಕ್ಷ ಮಂಜುನಾಥ ಹಿರೇಮಠ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ವಿಕಸಿತ ಭಾರತವನ್ನು ಕಟ್ಟುವ ದೃಢಸಂಕಲ್ಪ ಮಾಡೋಣ. ರಾಜ್ಯದಲ್ಲಿ ತಳಮಟ್ಟದಿಂದ ಸಂಘಟನೆ ಮೂಲಕ ಶೂನ್ಯದಿಂದ ಶಿಖರಕ್ಕೇರಿದ್ದು, ಇದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಬೆವರಿನ ಫಲವಾಗಿದೆ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ಕೋಗಳಿ ಹನುಮಂತಪ್ಪ, ಪ್ರಮುಖರಾದ ದಿವಾಕರಗೌಡ, ಮಂಜುನಾಥ ಮಾಲವಿ, ಮಲ್ಲಿಕಾರ್ಜುನ, ಮರಿಯಪ್ಪ, ಚಿರು ಬೆಳ್ಳಕ್ಕಿ, ಪೂಜಾರ ರಾಮೇಶಪ್ಪ, ಸಂತೋಷ ಬ್ಯಾಟಿ, ಮಂಜು, ಬಸವರಾಜ ಗೊಂಡಬಾಳು, ಆಶೊಕ, ಬಸವಪ್ಪ, ಸುರೇಶ ಇತರರಿದ್ದರು.