ಹಗರಿಬೊಮ್ಮನಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ನಾಯ್ಕ, ಉಪತಹಸೀಲ್ದಾರ್ ಶಿವಕುಮಾರಗೌಡಗೆ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಸ್ಥರು ಮನವಿ ಸಲ್ಲಿಸಿದರು. 
ವಿಜಯನಗರ

ತೇಪೆ ಹಾಕದೆ ದುರಸ್ತಿಗೆ ಮುಂದಾಗಲಿ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿಯಿಂದ ಪಟ್ಟಣ, ಹಗರಿಕ್ಯಾದಗಿಹಳ್ಳಿಯಿಂದ ಉಪನಾಯಕನಹಳ್ಳಿ ಹಾಗೂ ತಂಬ್ರಹಳ್ಳಿ-ಕೋಡಿಹಳ್ಳಿ-ತೋರಣಗಲ್ಲು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಸಾರ್ವಜನಿಕರು, ಗುರುವಾರ ಪಾದಯಾತ್ರೆ ನಡೆಸಿದರು.
ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿ, ಈ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಸ್ತೆಗಳಲ್ಲಿ ತಗ್ಗುಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ವಾಹನಗಳ ಟೈರ್ ಸವಕಳಿ ಆಗುತ್ತಿದ್ದು, ಇಂಧನ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಸಮಯವೂ ಹೆಚ್ಚುತ್ತಿದೆ. ಅಪಘಾತಗಳು ಕೂಡ ಹೆಚ್ಚುತ್ತಿವೆ. ಆದ್ದರಿಂದ, ರಸ್ತೆಗಳಿಗೆ ತೇಪೆ ಹಾಕದೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸವನಗೌಡ ಮಾತನಾಡಿ, ರಸ್ತೆಗಳ ಅವ್ಯವಸ್ಥೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಕೂಡಲೆ ರಸ್ತೆಗಳ ದುರಸ್ತಿ ಮಾಡಬೇಕಿದೆ ಎಂದು ಒತ್ತಾಯಿಸಿದರು.
ತೆಲುಗೋಳಿ, ಮುತ್ಕೂರು, ಕಿತ್ನೂರು, ಬನ್ನಿಗೋಳ, ಶೀಗೇನಹಳ್ಳಿ, ಚಿಲುಗೋಡು, ರಾಮೇಶ್ವರಬಂಡಿ, ಬ್ಯಾಸಗಿದೇರಿ, ನಂದಿಪುರ, ಹಗರಿಕ್ಯಾದಿಗಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಜನರು ತಂಬ್ರಹಳ್ಳಿಯಿಂದ ಪಟ್ಟಣದವರೆಗೆ 16 ಕಿ.ಮೀ. ಪಾದಯಾತ್ರೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ನಂತರ ಲೋಕೋಪಯೋಗಿ ಇಲಾಖೆ ಎಇಇ ಸತೀಶ್ ನಾಯ್ಕ ಹಾಗೂ ಉಪ ತಹಸೀಲ್ದಾರ್ ಶಿವಕುಮಾರಗೌಡಗೆ ಮನವಿ ಸಲ್ಲಿಸಿದರು.
ನಿವೃತ್ತ ಇಒ ವೆಂಕೋಬಪ್ಪ, ತಾ.ಪಂ.ಮಾಜಿ ಸದಸ್ಯರಾದ ಪಿ.ಕೊಟ್ರೇಶ, ಪಾಂಡುನಾಯ್ಕ, ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಿ.ಸುರೇಶ, ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಸದಸ್ಯ ಸದಸ್ಯ ಜಿ.ಗಿರೀಶ, ವಿಎಸ್‌ಎಸ್‌ಎನ್ ಅಧ್ಯಕ್ಷ ಮಾಬುಸಾಬ್, ಮಾಜಿ ಸದಸ್ಯರಾದ ಮಂಜುನಾಥ ಸರಾಯಿ, ಮಂಜುನಾಥ ಪಾಟೀಲ್, ಅಕ್ಕಿ ಶಿವಕುಮಾರ್, ಕಡ್ಡಿ ಚನ್ನಪ್ಪ, ಗೌರಜ್ಜನವರ ಬಸವರಾಜಪ್ಪ, ಆನಂದರೆಡ್ಡಿ, ಚಿಲುಗೋಡು ದೊಡ್ಡಬಸಪ್ಪ, ಮೇಟಿ ಮಂಜುನಾಥ, ವಿ.ಕೃಷ್ಣಪ್ಪ, ಲಚ್ಚಪ್ಪ, ಉಮೇಶ, ಲಿಂಗರಾಜ, ಪ್ರಕಾಶನಾಯ್ಕ, ಬಸವರಾಜಪ್ಪ, ನಿವೃತ್ತ ಪಿಡಿಒ ತೋಟಯ್ಯ, ಅಜೀಜ್ ಸಾಬ್ ಇತರರಿದ್ದರು.