ಹೊಸಪೇಟೆ ತಾಲೂಕಿನ ಭುವನಹಳ್ಳಿಯಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು.  
ವಿಜಯನಗರ

ಮಹನೀಯರ ತತ್ವಗಳನ್ನು ಪಾಲಿಸೋಣ

ಪ್ರಮುಖ ಮುಖ್ಯಾಂಶಗಳು

  • ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಗಂಗಾಮತ ಸಮಾಜದ ಅಧ್ಯಕ್ಷ ಟಿ.ಉಮಾಪತಿ ಕರೆ
ಹೊಸಪೇಟೆ: ತಾಲೂಕು ಭುವನಹಳ್ಳಿಯ ಗಂಗಾಮಠ ಸಮುದಾಯ ಭವನದಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಗಂಗಾಮತ ಸಮಾಜದ ಅಧ್ಯಕ್ಷ ಟಿ.ಉಮಾಪತಿ ಮಾತನಾಡಿ, ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುತ್ತದೆ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವರು. ಬಸವಣ್ಣನವರಿಂದ ಲಿಂಗದ ದೀಕ್ಷೆಯನ್ನು ಪಡೆದರು. ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವೇಲ್ಲರೂ ನಡೆಯಬೇಕಿದೆ ಎಂದರು .
ಗಂಗೆ ಪೂಜೆ ಮಾಡಿ ಕಲಶ ಮತ್ತು ಅಂಬಿಗರ ಚೌಡಯ್ಯ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು. ಪ್ರಮುಖರಾದ ಹುಲುಗಪ್ಪ, ಅಂಜಿನಪ್ಪ, ದೇವಣ್ಣ, ಜಂಬಯ್ಯ, ಮಲ್ಲಣ್ಣ, ಮಂಜುನಾಥ, ತಿಮ್ಮಪ್ಪ,ಭರ್ಮಪ್ಪ ಇತರರಿದ್ದರು.