ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಾಡೋಜ ಬರಗೂರು ರಾಮಚಂದ್ರಪ್ಪ ಪುಸ್ತಕಗಳ ಲೋಕಾರ್ಪಣೆಗೊಳಿಸಿದರು. ಕನ್ನಡ ವಿವಿ ಸಂಸ್ಥಾಪಕ ಕುಲಪತಿ ಡಾ.ಚಂದ್ರಶೇಖರ ಕಂಬಾರ, ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ ಇದ್ದರು.
- ಪುಸ್ತಕಗಳ ಲೋಕಾರ್ಪಣೆಗೊಳಿಸಿ ನಾಡೋಜ ಬರಗೂರು ರಾಮಚಂದ್ರಪ್ಪ ಕರೆ
ಹೊಸಪೇಟೆ: ಕನ್ನಡ ಒಂದು ಜಾತ್ಯಾತೀತ ಭಾಷೆ. ಎಲ್ಲಾ ಜಾತಿ, ಧರ್ಮದ ಜನರು ಕನ್ನಡ ಸಾಹಿತ್ಯವನ್ನು ಕಟ್ಟುತ್ತಾ ಬಂದಿದ್ದಾರೆ. ಕನ್ನಡವನ್ನು ಕೇಂದ್ರವನ್ನಾಗಿಸಿ ಮತ್ತು ಸಂಶೋಧನೆಯನ್ನು ಜೀವಾಳವಾಗಿಸಿಕೊಂಡಿರುವ ಕನ್ನಡ ವಿವಿಗೆ ಹೆಚ್ಚು ಬೆಂಬಲ ಸಿಗಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ 34ನೇ ನುಡಿಹಬ್ಬದ ನಿಮಿತ್ತ ಪ್ರಸಾರಾಂಗದಿAದ 42 ಪುಸ್ತಕಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರಸಾರಾಂಗಗಳು ಭೂತ ಮತ್ತು ಭವಿಷ್ಯದ ಚಿಂತನೆಗಳ ಜೊತೆ ಹೆಚ್ಚು ವರ್ತಮಾನದ ಮುಖಾಮುಖಿಯಾಗುವ, ಅನುಸಂಧಾನಗೊಳ್ಳುವ ಪುಸ್ತಕಗಳ ಪ್ರಕಟಣೆಗೆ ಒತ್ತು ನೀಡಬೇಕು. ಇತ್ತೀಚಿಗೆ ವಾಣಿಜ್ಯ, ವಾಸ್ತುಶಿಲ್ಪ, ಫ್ಯಾಶನ್ ತಂತ್ರಜ್ಞಾನ, ಹೊಟೇಲ್ ಮ್ಯಾನೇಜ್‌ಮೆಂಟ್ ಶಿಸ್ತುಗಳು ಮುನ್ನಲೆಯಲ್ಲಿದ್ದು, ಮಾನವಿಕ ಶಿಸ್ತುಗಳನ್ನು ಅಧ್ಯಯನ ಮಾಡುವವರ ಪ್ರಮಾಣ ಶೇ.05ರಷ್ಟಿದೆ. ಮಾನವಿಕ ಜ್ಞಾನ ಶಿಸ್ತುಗಳಿಗೆ ಹಿನ್ನಡೆಯಾಗುತ್ತಿದೆ. ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾನವಿಕ ಜ್ಞಾನಗಳ ಅಗತ್ಯವಿದೆ. ಈಗ ತಂತ್ರಜ್ಞಾನ ಜ್ಞಾನವಾಗಿ ಉಳಿದಿಲ್ಲ, ಉದ್ಯಮವಾಗಿ ಹೋಗಿದೆ. ಮನುಷ್ಯ ಜ್ಞಾನಕ್ಕಿಂತ ತಂತ್ರಜ್ಞಾನ ಮೇಲುಗೈ ಪಡೆದಿದೆ. ಪುಸ್ತಕಗಳ ಓದಿನ ಪ್ರವೇಶ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು. ಆದರೆ ದ್ವೇಷಗಳಿರಬಾರದು, ಬೌದ್ಧಿಕ ವಿಭಜಕ ಪ್ರವೃತ್ತಿಗಳಿರಬಾರದು. ಲೇಖಕರಾದ ನಾವೆಲ್ಲರೂ ಜನರಿಗೆ ಸತ್ಯವನ್ನು ಹೇಳುವ ರ‍್ಯಾದಸ್ಥ ಮನುಷ್ಯರಾಗೋಣ ಎಂದು ತಿಳಿಸಿದರು.
ಕನ್ನಡ ವಿವಿ ಸಂಸ್ಥಾಪಕ ಕುಲಪತಿ ಡಾ.ಚಂದ್ರಶೇಖರ ಕಂಬಾರ ಅವರು ಮಾತನಾಡಿ, ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿರುವುದು ನನಗೆ ಖುಷಿ ನೀಡಿದೆ. ಎಲ್ಲಾರಿಗೂ ಒಳಿತಾಗಲಿ ಎಂದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಪ್ರಕಟಿಸಿರುವ 42 ಪುಸ್ತಕಗಳು ಮನುಷ್ಯನ ಬೌದ್ಧಿಕ ಜ್ಞಾನದ ಚಟುವಟಿಕೆಯ ಸಂಕೇತವಾಗಿವೆ. ಇತಿಹಾಸ, ಶಾಸನ, ಜಾನಪದ, ಸಂಸ್ಕೃತಿ ವಿಷಯಗಳ ಪುಸ್ತಕಗಳಿಂದ ಹಿಡಿದು ಎ.ಐ. ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಿಗೆ ಸಂಬAಧಪಟ್ಟ ಪುಸ್ತಕಗಳನ್ನು ಪ್ರಕಟಿಸಿರುವುದು ಇದರ ಹೆಗ್ಗಳಿಕೆ ಎಂದರು.
ಪ್ರಸಾರಾAಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ ಮಾತನಾಡಿ, ವಿವಿಯಿಂದ 1,753 ಪುಸ್ತಕಗಳನ್ನು ಪ್ರಕಟಿಸಿದೆ. ವಿವಿ ಸೇರಿದಂತೆ ರಾಜ್ಯದ ವಿದ್ವಾಂಸರಿAದ ಪ್ರತಿವರ್ಷ ಪುಸ್ತಕಗಳನ್ನು ಪ್ರಕಟಿಸುತ್ತೇವೆ ಎಂದರು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸಹಾಯಕ ಕುಲಸಚಿವ ಎಂ.ಎA.ಶಿವಪ್ರಕಾಶ್, ಪ್ರಕಟಣಾ ಸಹಾಯಕ ಡಾ.ಎಸ್.ಮೋಹನ್ ಇದ್ದರು.