ಹೊಸಪೇಟೆ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ರಂಗಭೂಮಿ ಮತ್ತು ಮಹಿಳೆ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಮ.ಬ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಲಾವಿದರಾದ ಡಾ.ನಾಗರತ್ನಮ್ಮ, ಕಲಾವಿದರಾದ ಮಲ್ಲಿಕಾರ್ಜುನ ತುರುವನೂರು, ಮಹಾಂತೇಶ್, ನಾಗರಾಜ್ ಮಾಡ್ಲಾಕನಹಳ್ಳಿ ಇತರರಿದ್ದರು.
- ಮರಿಯಮ್ಮನಹಳ್ಳಿ ಕಲಾವಿದೆ ಡಾ.ನಾಗರತ್ನಮ್ಮ ಕರೆ
ಹೊಸಪೇಟೆ: ಆರಂಭದ ಹಂತದಲ್ಲಿ ಮೊದಲು ನಾಟಕಗಳಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ನಂತರ ಮಹಿಳೆಯರು ರಂಗಭೂಮಿ ಪ್ರವೇಶ ಮಾಡಿದರು ಎಂದು ಮರಿಯಮ್ಮನಹಳ್ಳಿ ರಂಗಭೂಮಿ ಕಲಾವಿದೆ ಡಾ.ನಾಗರತ್ನಮ್ಮ ತಿಳಿಸಿದರು.
ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯಿAದ ಬುಧವಾರ ನಡೆದ ರಂಗಭೂಮಿ ಮತ್ತು ಮಹಿಳೆ ಉಪನ್ಯಾಸದಲ್ಲಿ ಮಾತನಾಡಿದರು.
ಕನ್ನಡ ರಂಗಭೂಮಿಗೆ ಮೊದಲ ಮಹಿಳಾ ಕಲಾವಿದೆಯಾಗಿ ಗುಳೇದಗುಡ್ಡ ಯಲ್ಲುಬಾಯಿ ಪಾದಾರ್ಪಣೆ ಮಾಡಿದರು. ಮಹಿಳಾ ಕಲಾವಿದರು ರಂಗಭೂಮಿ ಪ್ರವೇಶಿದರು. ಬಹುತೇಕ ಮಹಿಳಾ ಕಲಾವಿದೆಯರು ತಮ್ಮ ಕುಟುಂಬ ಹಾಗೂ ಜೀವನ ನಿರ್ವಹಣೆಗಾಗಿ ರಂಗಭೂಮಿ ಪ್ರವೇಶ ಮಾಡಿದರು. ತಮ್ಮ ಕಷ್ಟ ನೋವು, ನಲಿವುಗಳನ್ನು ಮರೆತು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲಾವಿದೆಯರ ಕೊರತೆ ಉಂಟಾಗಿದೆ. ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ ನಾಟಕಗಳಲ್ಲಿ ಅಭಿನಯಿಸಲು ಕಲಾವಿದೆಯರಿಲ್ಲ. ಹಾಗಾಗಿ ಯುವತಿಯರು ರಂಗಭೂಮಿ ಪ್ರವೇಶ ಮಾಡಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.
ಹಿರಿಯ ರಂಗಕರ್ಮಿ ಮ.ಬ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ದೇವರಾಜ್ ಗಿಣಿಗೇರ ಅವರಿಗೆ ಸಂಸ್ಥೆಯ ವತಿಯಿಂದ ಶ್ರೀ ವಾಲ್ಮೀಕಿ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಾವಿದರಾದ ಮಲ್ಲಿಕಾರ್ಜುನ ತುರುವನೂರು, ಮಹಾಂತೇಶ್, ನಾಗರಾಜ್ ಮಾಡ್ಲಾಕನಹಳ್ಳಿ, ಕಾಲೇಜಿನ ಪ್ರಾಂಶುಪಾಲ ಡಾ.ವೀರಭದ್ರಪ್ಪ ತಂಬ್ರಹಳ್ಳಿ, ಸಂಸ್ಥೆ ಅಧ್ಯಕ್ಷೆ ವಿ.ಅನುರಾಧ, ಪ್ರಮುಖರಾದ ಮಧುರ ಚೆನ್ನಶಾಸ್ತ್ರಿ ಹಿರೇಮಠ, ಯಲ್ಲನಗೌಡ ಶಂಕರಬAಡೆ, ವಿಶ್ವನಾಥ್ ಸಾಹುಕಾರ್, ರಾಜೇಶ್ ಇತರರಿದ್ದರು.