ಹೊಸಪೇಟೆ ವಡಕರಾಯ ದೇಗುಲದಲ್ಲಿ ಸೋಮವಾರ ಬಲಿದಾನ ದಿನದ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ನ ಮುಖ್ಯಸ್ಥ ಪಾಂಡುರAಗ ಮಾತನಾಡಿದರು. ಪತಂಜಲಿ ರಾಜ್ಯ ಯುವ ಪ್ರಭಾರಿ ಕಿರಣ್‌ಕುಮಾರ, ಜಿಲ್ಲಾ ಯುವ ಪ್ರಭಾರಿ ವಿರೇಶ್ ಕನಕೇರಿಮಠ ಇತರರಿದ್ದರು. 
ವಿಜಯನಗರ

ವಿಶ್ವಶಾಂತಿಗಾಗಿ ನಮ್ಮನು ಸಮರ್ಪಿಸಿಕೊಳ್ಳೋಣ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಅಭಿಪ್ರಾಯ
ಹೊಸಪೇಟೆ: ತಮ್ಮ ತ್ಯಾಗ, ಬಲಿದಾನಗಳ ಮೂಲಕ ಶಾಂತಿ ನೆಮ್ಮದಿಯಿಂದ ಇರಲು ಕಾರಣರಾದ ಎಲ್ಲಾ ರಾಷ್ಟç ಭಕ್ತ ತ್ಯಾಗಿಗಳಿಗೆ ವಿಶ್ವಶಾಂತಿಯ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಅಭಿಪ್ರಾಯಪಟ್ಟರು.
ಪತಂಜಲಿ ಯೋಗ ಸಮಿತಿಯಿಂದ ನಗರದ ವಡಕರಾಯ ದೇಗುಲದಲ್ಲಿ ಸೋಮವಾರ ಆಯೋಜಿಸಿದ್ದ ರಾಜಗುರು, ಭಗತ್‌ಸಿಂಗ್ ಹಾಗೂ ಸುಖದೇವ್ ಹುತಾತ್ಮ ದಿನ ನಿಮಿತ್ತ ಆಯೋಜಿಸಿದ ಬಲಿದಾನ ದಿನದ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದರು.
ರಾಜಗುರು, ಭಗತ್‌ಸಿಂಗ್ ಹಾಗೂ ಸುಖದೇವ್ ಮೂವರು ಸೇರಿದಂತೆ ಅದೆಷ್ಟೋ ತ್ಯಾಗಿಗಳ ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ತ್ಯಾಗಗಳನ್ನು ಮಾಡಿದವರ ನೆನೆಯಬೇಕಿದೆ. ಸ್ವಾಂತತ್ರö್ಯವನ್ನು ಉಳಿಸಿ ನಮ್ಮ ದೈಹಿಕ ಮಾನಸಿಕ ನೆಮ್ಮದಿಯ ಜತೆ ವಿಶ್ವಶಾಂತಿಗಾಗಿ ನಮ್ಮನು ನಾವು ಸಮರ್ಪಿಸಿಕೊಳ್ಳಬೇಕು ಎಂದರು.
ಯುವ ಬ್ರಿಗೇಡ್‌ನ ಸಂಚಾಲಕ ಪಾಂಡುರAಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಮ್ಮ ವಯಸ್ಸಿಗೆ ಮೀರಿದ ಯೋಚನೆಯ ಮೂಲಕ ಪ್ರಾಣ ತ್ಯಾಗ ಮಾಡಿದ ಈ ಮೂವರು ದೇಶಭಕ್ತರಿಗೆ ನಾವು ಗೌರವ ಸಲ್ಲಿಸಬೇಕಾದರೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪತಂಜಲಿ ರಾಜ್ಯ ಯುವ ಪ್ರಭಾರಿ ಕಿರಣ್‌ಕುಮಾರ, ಜಿಲ್ಲಾ ಯುವ ಪ್ರಭಾರಿ ವಿರೇಶ್ ಕನಕೇರಿಮಠ, ಪ್ರಮುಖರಾದ ಬಾಲಚಂದ್ರ ಶರ್ಮಾ, ರಾಜೇಶ್ ಕರ್ವಾ, ಸತ್ಯಪ್ಪ, ಲಲಿತಾ ಪಾಟೀಲ್, ಪ್ರಕಾಶ ಕುಲಕರ್ಣಿ, ಶ್ರೀರಾಮ, ಅನಂತ ಜೋಶಿ, ಶಿವಮೂರ್ತಿ, ಕವಿತಾ ಆನಂದ್, ಡಾ.ಸಮಂಗಲಾದೇವಿ, ರೇಣುಕಾ ಪಾಟೀಲ್, ಅಶೋಕ ಚಿತ್ರಗಾರ, ವಿಠೋಬ ಬಲ್ಲಾಳ್, ರಾಜಾಭಕ್ಷಿ, ಅಕ್ಷಯ ಆಚಾರಿ ಇತರರಿದ್ದರು.