ಹರಪನಹಳ್ಳಿ ತಾಲೂಕಿನ ನಾಗತಿಕಟ್ಟೆ ತಾಂಡದಲ್ಲಿ ಶ್ರೀ ಸೇವಾಲಾಲ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಚಾಲನೆ ನೀಡಿದರು.
ಹರಪನಹಳ್ಳಿ: ಕ್ರೀಡೆಗಳು ಬಾಂಧವ್ಯ ವೃದ್ದಿಸುವಂತಿರಲಿ, ಹೊರತು ದ್ವೇಷವನ್ನಲ್ಲ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ನಾಗತಿಕಟ್ಟೆ ತಾಂಡದಲ್ಲಿ ಶ್ರೀ ಸೇವಾಲಾಲ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಕ್ರೀಡೆಯಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಗ್ರಾಮಾಂತರ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.