ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ದೇವದಾಸಿ ಮಹಿಳೆಯರ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷೆ ಟಿ.ವಿ.ರೇಣುಕಮ್ಮ, ಕಾರ್ಯದರ್ಶಿ ಕೆ.ನಾಗರತ್ನಮ್ಮ, ಪ್ರಮುಖರಾದ ಭಾಸ್ಕರ್ ರೆಡ್ಡಿ, ವಿ.ಸ್ವಾಮಿ ಇತರರಿದ್ದರು. 
ವಿಜಯನಗರ

ಲೋಪವಿಲ್ಲದೇ ದೇವದಾಸಿಯರ ಸರ್ವೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿAದ ಪ್ರತಿಭಟನೆ
ಹೊಸಪೇಟೆ: ದೇವದಾಸಿ ಮಹಿಳೆಯರ ಸರ್ವೆಕಾರ್ಯ ಸರಿಯಾಗಿ ನಡೆಯಲಿ ಎಂದು ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯಿಂದ ರಾಜ್ಯ ಸರ್ಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಎಲ್ಲಾ ದೇವದಾಸಿ ಮಹಿಳೆಯರು ಹಾಗೂ ಅವರ ಮೂರು ತಲೆಮಾರಿನ ಕುಟುಂಬಗಳನ್ನು ಯಾವುದೇ ಷರತ್ತಿಲ್ಲದೆ ಸರ್ವೆ ಮಾಡಬೇಕು. 2007ರಲ್ಲಿ ಸರ್ಕಾರವೇ ಸರ್ವೇ ಮಾಡಿದ ದೇವದಾಸಿ ಮಹಿಳೆಯರನ್ನು ವಯೋಮಿತಿ ಹೇರಿ ಸರ್ವೆಯಿಂದ ಕೈ ಬಿಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ವೆಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ಸಾಲ ಸೌಲಭ್ಯ ಸಹಾಯಧನ ಎರಡು ಲಕ್ಷ ರೂ. ನೀಡಬೇಕು. 2026 ಬಜೆಟ್ ನಲ್ಲಿ ಸಹಾಯ ಧನ ಅಥವಾ ಪಿಂಚಣಿಯನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಅನುಸಾರ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ನಿರುದ್ಯೋಗ ಬತ್ತೆ 10 ಸಾವಿರ ನೀಡಬೇಕು. ಹೆಚ್ಚು ಜಮೀನು ಹೊಂದಿದ ಕುಟುಂಬಗಳಿAದ ಕೈಗಾರಿಕೆಗಳಿಗೆ ಭೂ ಸ್ವಾಧೀನ ಮಾಡಿವ ಮಾದರಿಯಲ್ಲಿ ತಲ ಐದು ಎಕರೆ ಜಮೀನು ನೀಡಬೇಕು. ನೀವೇಶನ ಸೇರಿ ಮನೆಗಳನ್ನು ಉಚಿತವಾಗಿ ಕಟ್ಟಿಸಿಕೊಡಬೇಕು. ಹೈನುಗಾರಿಕೆ ಮಾಡಿಕೊಳ್ಳುವುದಕ್ಕೆ ಐದು ಲಕ್ಷ ಸಹಾಯಧನ ನೀಡಬೇಕು. ಮದುವೆ ಸಹಾಯ ಧನಕ್ಕೆ ಅರ್ಜಿ ಹಾಕಿದ ಮಕ್ಕಳಿಗೆ ಒಂದು ವರ್ಷದಲ್ಲಿ ಹಣ ಬಿಡುಗಡೆ ಮಾಡಬೇಕು. ಉದ್ಯೋಗ ಖಾತ್ರಿಯಲ್ಲಿ 200 ದಿನಗಳ ಕೆಲಸ ನೀಡಬೇಕು. ಕೂಲಿ 10 ಸಾವಿರ ರೂ. ನೀಡಬೇಕು. 2025ರ ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.