ಹಗರಿಬೊಮ್ಮನಹಳ್ಳಿಯಲ್ಲಿ ತಾಲೂಕು ರೈಲ್ವೆ ಹೋರಾಟ ಸಮಿತಿ ಸಭೆ ನಡೆಯಿತು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಸಂಚಾಲಕ ಕೊಟ್ರೇಶ ಶೆಟ್ಟರ್ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ರೈಲ್ವೆ ಹೋರಾಟ ಸಮಿತಿ ತಾಲೂಕು ಸಂಚಾಲಕ ಕೊಟ್ರೇಶ ಶೆಟ್ಟರ್ ಹೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಜ.4ರಂದು ಪಟ್ಟಣಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ತಾಲೂಕು ರೈಲ್ವೆ ಹೋರಾಟ ಸಮಿತಿ, ಮಠಾಧೀಶರಿಂದ ಪಟ್ಟಣದ ರೈಲು ನಿಲ್ದಾಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗುರುವಾರ ಮಾತನಾಡಿದರು. ಪಟ್ಟಣದ ರೈಲು ನಿಲ್ದಾಣದಲ್ಲಿ ಮಹಿಳೆಯರ ಶೌಚಗೃಹವಿಲ್ಲ. ರೈಲ್ವೆ ಗೇಟ್ 37 ಹಾಗೂ 38ರಲ್ಲಿ ನಿತ್ಯ ದಿನಕ್ಕೆ ಮೂರ‌್ನಾಲ್ಕು ಬಾರಿ ಸಂಚಾರ ಸಮಸ್ಯೆಯಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಚಿವ ಸೋಮಣ್ಣ ಅವರ ಗಮನ ಸೆಳೆಯೋಣ ಎಂದರು.
ನಂದಿಪುದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ರೈಲ್ವೆ ಗೇಟ್ 35ರ ಕಾಮಗಾರಿ ವೀಕ್ಷಣೆಗೆ ರೈಲ್ವೆ ಸಚಿವ ವಿ.ಸೋಮಣ್ಣ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು ಆಗಮಿಸಲಿದ್ದಾರೆ. ಪಟ್ಟಣದ ರೈಲು ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು, ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಮನವಿ ಸಲ್ಲಿಸೋಣ ಎಂದರು.
ಶ್ರೀ ಹಾಲಸ್ವಾಮಿ ಮಠದ ಹಾಲ ಸಿದ್ದೇಶ್ವರ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಸಿಐಟಿಯು ತಾಲೂಕು ಸಂಚಾಲಕ ಜಗನ್ನಾಥ್, ವಕೀಲರಾದ ಅಕ್ಕಿ ಮಲ್ಲಿಕಾರ್ಜುನ, ಟಿ.ಶಿವಪ್ರಕಾಶ್, ಡಿಶ್ ಮಂಜುನಾಥ, ಲಕ್ಯಾನಾಯ್ಕಾ, ಜವಳಿ ವರ್ತಕರ ಸಂಘದ ಅಧ್ಯಕ್ಷ ಸಾಲುಮಾನಿ ನಾಗರಾಜ, ಅಡೂರು ಶಿವಕುಮಾರ್, ಫೋಟೋ ರಾಮಣ್ಣ, ವೆಂಕಟೇಶ, ಗದ್ದಿಕೆರೆ ನಾಗಭೂಷಣ, ನಾಗಯ್ಯ ಸ್ವಾಮಿ, ಶ್ರೀಶೈಲಸ್ವಾಮಿ, ಮುಟುಗನಹಳ್ಳಿ ಕೆ.ಹನುಮಂತಪ್ಪ, ಉಪ್ಪಾರ್ ವೆಂಕಟೇಶ್, ವೀರಣ್ಣ ಮೆಣಸಿಗಿ, ಹನುಮಂತಪ್ಪ, ಡಿ.ಪತ್ರೆಪ್ಪ ಇತರರಿದ್ದರು.