ಹೊಸಪೇಟೆ ಎಸ್‌ಎಲ್ ಚೌಕಿಯ ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಯಿತು. ಎಸ್‌ಡಿಎಂಸಿ ಸದಸ್ಯೆ ಉಮಾ, ಪ್ರಮುಖರಾದ ರತ್ನಮ್ಮ, ತನು, ಬಾಬು ಸಾಬ್ ಇತರರಿದ್ದರು. 
ವಿಜಯನಗರ

ಎಸ್.ಎಲ್.ಚೌಕಿ ಶಾಲೆ ಉಳಿಯಲಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಶಾಲೆ ವಿರುದ್ಧ ಎಐಡಿಎಸ್‌ಒ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ
ಹೊಸಪೇಟೆ: ಇಲ್ಲಿನ ಎಸ್‌ಎಲ್ ಚೌಕಿಯ ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕ ಶಾಲೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಬಗ್ಗೆ ರಾಜ್ಯದಲ್ಲಿ ವಿರೋಧದ ನಡುವೆಯೂ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಆರಂಭಿಸಿ, ಬಡವರ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ ನಡೆಸುತ್ತಿದೆ. 1970ಕ್ಕಿಂತ ಮುಂಚೆ ಸಿದ್ದಲಿಂಗಪ್ಪ ಚೌಕಿಯ ಮೂರನೇ ಕ್ರಾಸಿನಲ್ಲಿ ಗುಡಿಸಲಿನಲ್ಲಿ ಈ ಶಾಲೆ ಇತ್ತು, ನಂತರ ಭಜನಾಮಂದಿರ ಸ್ಥಳಂತಾರವಾಯಿತು.
ಸರ್ಕಾರಿ ಶಾಲೆ ಇರಬೇಕು ಎಂದು ಹಿಂದಿನ ಕಾಲದ ಜನ ಶ್ರಮಪಟ್ಟು ಕಟ್ಟಿಸಿದರು. ಈ ಶಾಲೆಯನ್ನು, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಲ್ಲಿ ಮುಚ್ಚುತ್ತಿರುವುದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.