ಹಗರಿಬೊಮ್ಮನಹಳ್ಳಿಯಲ್ಲಿ ಬಣಜಿಗ ಸಮಾಜದ ಸಮಾಜದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 
ವಿಜಯನಗರ

ಪ್ರತಿಯೊಂದು ಕುಟುಂಬ ನೋಂದಣಿ ಮಾಡಿಸಲಿ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ಶ್ರೀ ಕಲ್ಲೇಶ್ವರ ದೇಗುಲದಲ್ಲಿ ಬಣಜಿಗ ಸಮಾಜದ ಸಭೆ ಹಾಗೂ ತಾಲೂಕು ಬಣಜಿಗ ಸಮಾಜದ ಸದಸ್ಯತ್ವ ಅಭಿಯಾನ ಬುಧವಾರ ನಡೆಯಿತು.
ಸಮಾಜದ ತಾಲೂಕು ಅಧ್ಯಕ್ಷ ಅಂಗಡಿ ರಾಜಪ್ಪ ಮಾತನಾಡಿ, ಸಮುದಾಯದ ಪ್ರತಿಯೊಂದು ಕುಟುಂಬದವರು ನೋಂದಣಿ ಮಾಡಿಸಬೇಕು. ಇದು ಎಲ್ಲರ ಜವಾಬ್ದಾರಿ ಆಗಿರುವುದರಿಂದ ನಿರ್ಲಕ್ಷಿಸಬಾರದು ಎಂದರು.
ವಕೀಲ ಬಿ.ವಿ.ಶಿವಯೋಗಿ, ಪ್ರಮುಖರಾದ ಹಾಲ್ದಾಳ್ ವಿಜಯಕುಮಾರ್, ಪಟೇಲ್ ಮಂಜುನಾಥ್, ಆರ್.ವಿ.ಚನ್ನಬಸಪ್ಪ, ಶಿವಕುಮಾರ್ ಬೆಲ್ಲದ್, ಹಿಮರಾಜ್, ಚಿನಿವಾಲರ ಕೊಟ್ರೇಶ್, ವಾಲಿ ಮಲ್ಲಿಕಾರ್ಜುನ, ರೊಟ್ಟಿ ಕೊಟ್ರಪ್ಪ, ಲೇಪಾಕ್ಷಿ, ಬಸವನಗೌಡ ಪಾಟೀಲ್, ಬಾವಿಹಳ್ಳಿ ಅಂಬರೀಶಪ್ಪ, ಮಹಿಳಾ ಘಟಕದ ತಾಲೂಕ ಅಧ್ಯಕ್ಷೆ ಕವಿತಾ ಹಾಲ್ದಾಳ್, ಶೋಭಾ, ಸುಧಾ, ಪಂಕಜಾ, ಬಿ.ಶಿವಲೀಲಾ, ಕೆ.ಪ್ರೇಮಾ, ಅಂಗಡಿ ಕೊಟ್ರಮ್ಮ ಇತರರಿದ್ದರು.