ಹೊಸಪೇಟೆ ತಾಲೂಕಿನ ಗಿರೇನಳ್ಳಿ ಕ್ರಾಸ್ ಬಳಿ ಅಪಘಾತದಲ್ಲಿ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿರುವುದು. 
ವಿಜಯನಗರ

ಅಪರಿಚಿತ ವಾಹನ ಡಿಕ್ಕಿ ಚಿರತೆ ಸಾವು

ಮಂಜುನಾಥ
ಹೊಸಪೇಟೆ: ಹೆದ್ದಾರಿ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ 5 ವರ್ಷದ ಗಂಡು ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಗಿರೇನಳ್ಳಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಹೊಸಪೇಟೆ ಉಪ ವಿಭಾಗದ ತಿಮ್ಮಲಾಪುರದಿಂದ ಶಿವಪುರದವರೆಗಿನ ಪ್ರದೇಶವು ದಟ್ಟವಾದ ಅರಣ್ಯ ವಲಯದಿಂದ ಕೂಡಿದ್ದು, ಇಲ್ಲಿ ಚಿರತೆ, ಕರಡಿ ಸೇರಿದಂತೆ ನೂರಾರು ವನ್ಯಜೀವಿಗಳು ವಾಸಿಸುತ್ತಿವೆ. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಪ್ರಾಣಿಗಳು ಹೆದ್ದಾರಿ ದಾಟುವಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.