ಹಗರಿಬೊಮ್ಮನಹಳ್ಳಿಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕೋರ್ಟ್ ಕಲಾಪ ಬಹಿಷ್ಕರಿಸಿ ಬುಧವಾರ ಪ್ರತಿಭಟನೆ ನಡೆಸಿದರು. ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್, ಜಾಣಾ ಶಿವಾನಂದ, ಅಶೋಕ ಕನಿಕೇರಿ, ಬಾವಿ ಪ್ರಕಾಶ, ಅಕ್ಕಿ ಮಲ್ಲಿಕಾರ್ಜುನ, ಕೆ.ಜಗದೀಶ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ವಕೀಲರ ಸಂಘದ ನಿರ್ಣಯಗಳಿಗೆ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳು ಸ್ಪಂದಿಸದ ಕಾರಣ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕಲಾಪ ಬಹಿಷ್ಕರಿಸಿ ಬುಧವಾರ ಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕೊಟ್ರೇಶ್ ಶೆಟ್ಟರ್ ಮಾತನಾಡಿ, ಸಂಘದ ಕೆಲ ನಿರ್ಣಯಗಳು ಸದಸ್ಯರ ಪರವಿದ್ದರಿಂದ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು ಸ್ಪಂದಿಸುತ್ತಿಲ್ಲ. ಹೀಗಾಗಿ ಒಂದು ದಿನದ ಮಟ್ಟಿಗೆ ಕಲಾಪಗಳಿಂದ ದೂರ ಉಳಿದಿದ್ದೇವೆ. ಸಂಘವು ರಾಜ್ಯದೆಲ್ಲೆಡೆ ಏಕಾಕಲಕ್ಕೆ ಪ್ರತಿಭಟನೆ ಹಮ್ಮಿಕೊಂಡಿದ್ದು, ನಮ್ಮ ತಾಲೂಕು ಸಂಘದಿಂದಲೂ ಬೆಂಬಲ ನೀಡಲಾಗಿದೆ ಎಂದು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ವಿಶಲಾಕ್ಷಮ್ಮ, ಶಿವಾನಂದ, ಅಶೋಕ ಕನಿಕೇರಿ, ಪೂಜಾರ್ ರಮೇಶ, ಉಪಾಧ್ಯಕ್ಷರಾದ ಬಿ.ಎಂ. ಆಂಜನೇಯ, ಕಾರ್ಯದರ್ಶಿ ಬಿ.ಮಂಜಣ್ಣ, ಪ್ರಮುಖರಾದ ಬಾವಿ ಪ್ರಕಾಶ, ಅಕ್ಕಿ ಮಲ್ಲಿಕಾರ್ಜುನ, ಕೆ.ಜಗದೀಶ, ಎಸ್.ಎಂ. ಶ್ರೀನಿವಾಸ, ಸಿ.ಬಸವರಾಜ, ಟಿ.ಜಿ.ಎಂ.ಕೊಟ್ರೇಶ, ಎಸ್.ನಿಂಗನಗೌಡ್ರು, ಮಹೇಶ್ವರಗೌಡ್ರು, ಪೂರ್ಣಿಮಾ, ಜಾಸ್ಮೀನ್, ವೀಣಾ, ಎಚ್. ಆಂಜನೇಯ ಇತರರಿದ್ದರು.