ಹೊಸಪೇಟೆ ಅಯ್ಯಪ್ಪ ಸ್ವಾಮಿ ದೇಗುಲದ ಕುಂಭಾಭಿಷೇಕದಲ್ಲಿ ಭಾಗವಹಿಸಿದ ಭಕ್ತರು.
- ಭಕ್ತರು ದೇಗುಲದ ಶಿಖರಕ್ಕೆ ಕಲಶಾಭಿಷೇಕ
ಹೊಸಪೇಟೆ: ನಗರದ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ದ್ರವ್ಯಕಲಶ ಮತ್ತು ಕುಂಭಾಭಿಷೇಕ ನಡೆದಿದ್ದು, ಶನಿವಾರ ನೂರಾರು ಭಕ್ತರು ದೇಗುಲದ ಶಿಖರಕ್ಕೆ ಕಲಶಾಭಿಷೇಕ ಮಾಡುವ ಮೂಲಕ ಹರಿಕೆ ಸಮರ್ಪಿಸಿದರು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬAದAತೆ ದೇಗುಲದಲ್ಲಿ ಬ್ರಹ್ಮಕಲಶ ಆಗಬೇಕು ಎಂಬ ಸೂಚನೆಯಂತೆ ಕಳೆದ ಭಾನುವಾರದಿಂದ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳವಾರ ಮಾಂಗಲ್ಯ ಪೂಜೆ, ಸ್ವಯಂವರ ಹೋಮ, ಬುಧವಾರ ಸರ್ಪಬಲಿ ಸೇವೆ, ಆಶ್ಲೇಷ ಬಲಿ, ಬುಧವಾರ ಭಗವತೀ ಸೇವೆ ನಡೆದಿತ್ತು. ಶನಿವಾರ ದೇಗುಲದಲ್ಲಿ ವರ್ಷಂಪ್ರತಿ ನಡೆಯುವಂತೆ ಮಂಡಲ ಪೂಜೆಯೂ ನಡೆಯಿತು. ಅದೇ ಶುಭ ಸಂದರ್ಭದಲ್ಲಿ ದ್ರವ್ಯಕಲಶ ಮತ್ತು ಕುಂಭಾಭಿಷೇಕ ನಡೆಯಿತು. ಶನಿವಾರ ಸಂಜೆ ಪಟೇಲ್ ನಗರದ ಗೋಪಾಲಕೃಷ್ಣ ದೇಗುಲದಿಂದ ಅಯ್ಯಪ್ಪ ಸ್ವಾಮಿ ದೇಗುಲದ ವರೆಗೆ ಅಯ್ಯಪ್ಪ ಸ್ವಾಮಿಯ ಶೋಭಾಯಾತ್ರೆ ನಡೆಯಿತು.
ದೇಗುಲದ ಪ್ರಧಾನ ಅರ್ಚಕ ಇ.ಎನ್.ಶಂಕರನ್ ನಂಬೂದಿರಿ ಅವರ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಾವಿರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಅಯ್ಯಪ್ಪ ಸ್ವಾಮಿ ಟೆಂಪಲ್ ಟ್ರಸ್ಟ್ನ ಅಧ್ಯಕ್ಷ ಜನಾರ್ದನ ರೆಡ್ಡಿ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್, ಪ್ರಮುಖರಾದ ರವೀಂದ್ರನಾಥ ಗುಪ್ತ, ರಾಜೇಶ್, ಬರಡೆ ನಾರಾಯಣ, ಶಿವಪ್ರಸಾದ್, ಗಣೇಶ್ ಇತರರಿದ್ದರು.