ಹೊಸಪೇಟೆಯಲ್ಲಿ ಗುರುವಾರ ಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕಾಲಯವನ್ನು ಬಲ್ಡೋಟ ಕಂಪನಿಗಳ ಸಮೂಹದ ಅಧ್ಯಕ್ಷ ಡಾ.ನರೇಂದ್ರ ಕುಮಾರ್ ಎ.ಬಲ್ದೋಟ ಉದ್ಘಾಟಿಸಿದರು. ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಇತರರಿದ್ದರು.  
ವಿಜಯನಗರ

ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಕನ್ನಡ ವಿವಿ ಪಾತ್ರ ಅಪಾರ

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ಪುಸ್ತಕಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿಕೆ

ಹೊಸಪೇಟೆ: ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಅವುಗಳ ಪ್ರಕಟಣೆ ಪ್ರಸಾರ ಕಾರ್ಯದಲ್ಲಿಕನ್ನಡ ವಿವಿಯು ನಾಡಿನಲ್ಲಿ ಮುಂಚೂಣಿಯಲ್ಲಿದೆ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಕನ್ನಡವಿವಿಯ ಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ವಿವಿ ಕಳೆದ 33 ವರ್ಷಗಳಿಂದ ಅತ್ಯುತ್ತಮವಾದ ಪುಸ್ತಕಗಳನ್ನುಪ್ರಕಟಿಸುವುದಷ್ಟೇ ಅಲ್ಲದೇ, ವ್ಯವಸ್ಥಿತವಾಗಿ ಓದುಗರ ಮನೆ ಮನಗಳಿಗೆ ತಲುಪಿಸುವಲ್ಲಿ ಪ್ರಸಾರಾಂಗವುಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ರಾಜ್ಯದ ಎಲ್ಲ ವಿವಿಗಳಿಗಿಂತ ಕನ್ನಡ ವಿವಿ ಪುಸ್ತಕಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. 1600ಕ್ಕೂ ಹೆಚ್ಚುಮೌಲಿಕ ಪುಸ್ತಕಗಳನ್ನು ಪ್ರಸಾರಾಂಗ ಪ್ರಕಟಿಸಿದೆ. ಈ ಪುಸ್ತಕಗಳನ್ನು ಓದುಗರಿಗೆ, ಮಾರಾಟಗಾರರಿಗೆ ತಲುಪಿಸುವಲ್ಲಿಸಹಕಾರಿಯಾಗಲು ಈ ಹಿಂದೆ ಇದ್ದ ವಾಹನವನ್ನು ಪುನರ್‌ನವೀಕರಿಸಿ ಶಾಲೆ, ಕಾಲೇಜು, ವಿವಿಗಳು, ಸಾಹಿತ್ಯಸಮ್ಮೇಳನಗಳಲ್ಲಿ ಈ ವಾಹನದ ಮೂಲಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದುಎಂದರು.

ಬಲ್ಡೋಟ ಕಂಪನಿಗಳ ಸಮೂಹದ ಅಧ್ಯಕ್ಷ ಡಾ.ನರೇಂದ್ರ ಕುಮಾರ್ ಎ.ಬಲ್ದೋಟಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕ ಉದ್ಘಾಟಿಸಿ ಮಾತನಾಡಿದರು. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ,ಪ್ರಸಾರಾಂಗದ ನಿರ್ದೇಶಕರಾದ ಡಾ. ಪಿ. ಮಹಾದೇವಯ್ಯ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ್,ಉಪ ಪ್ರಾಚಾರ್ಯ ಪಿ.ಶ್ರೀಧರ್ ಇತರರಿದ್ದರು.