ಕನ್ನಡ ವಿವಿಯಲ್ಲಿ ಶುಕ್ರವಾರ ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಏಕತಾರಿ ನುಡಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕರ್ನಾಟಕ ಜಾನಪದ ವಿವಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ, ಸಂಗೀತ ನಿರ್ದೇಶಕ ದೇವೇಂದ್ರಕುಮಾರ ಪತ್ತಾರ, ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಇತರರಿದ್ದರು. 
ವಿಜಯನಗರ

ಕಬೀರರ ಏಕತಾ ಸಂದೇಶ ಪ್ರಸ್ತುತ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಸಂತ ಕಬೀರ ವಿಚಾರಗೋಷ್ಠಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯ
ಹೊಸಪೇಟೆ: ಜಾತಿ ಹಾಗೂ ಧರ್ಮಗಳ ಹೆಸರಿನಲ್ಲಿ ಗೋಡೆಗಳನ್ನು ನಿರ್ಮಿಸಿ ವಿಭಜನೆಯ ದಾರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಎಲ್ಲರನ್ನು ಏಕತೆಯ ಕಡೆಗೆ ನಡೆಸುವ ಮಹಾನ್ ಚಿಂತಕರಲ್ಲಿ ಕಬೀರರು ಪ್ರಮುಖರು ಎಂದು ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದ್ದಾರೆ.
ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿರೇಹಾಳ್ ಇಬ್ರಾಹಿಂ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಭುವನವಿಜಯ ಸಭಾಂಗಣದಲ್ಲಿ ಹಿರೇಹಾಳ್ ಇಬ್ರಾಹಿಂ ದತ್ತಿನಿಧಿ ಕಾರ್ಯಕ್ರಮ ನಿಮಿತ್ತ ಸಂತ ಕಬೀರ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ದುಷ್ಟರನ್ನು ಎಲ್ಲರಲ್ಲಿಯೂ ಹುಡುಕಿದೆ ಯಾರೂ ಕಾಣಲಿಲ್ಲ. ಕೊನೆಗೆ ಅರಿತುಕೊಂಡೆ, ದುಷ್ಟನು ನನ್ನ ಅಂತರAಗದಲ್ಲೇ ಇದ್ದಾನೆ ಎಂಬ ಕಬೀರರ ವಾಕ್ಯವನ್ನು ಅವರು ನೆನಪಿಸುತ್ತ, ಈ ಮೂಲಕ ಆತ್ಮಪರಿಶೀಲನೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಮನುಷ್ಯರಲ್ಲಿ ಮನುಷ್ಯತ್ವವನ್ನು ಗುರುತಿಸುವುದೇ ಕಬೀರರು ತೋರಿಸಿದ ಮಾರ್ಗವಾಗಿದ್ದು, ಅದನ್ನು ಅನುಸರಿಸುವುದರಿಂದ ಸಮಾಜದಲ್ಲಿ ಉತ್ತಮ ಮೌಲ್ಯಗಳು ಬೆಳೆಸಬಹುದು ಎಂದರು.
ಸಾಹಿತಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಬೀರರು ಎಲ್ಲಾ ಧರ್ಮಗಳಿಗೂ ಸೇರಿದ ಮಹಾನ್ ಸಂತರು. ಅವರು ಕಾಯಕ ನಿಷ್ಠರು, ಯಾವುದೇ ಧರ್ಮದಲ್ಲಿರುವ ಮೂಢನಂಬಿಕೆಗಳನ್ನು ವಿರೋಧಿಸಿ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರು ಎಂದರು.
ಕರ್ನಾಟಕ ಜಾನಪದ ವಿವಿಯ ಸಂಶೋಧನಾ ಅಧಿಕಾರಿ ಡಾ.ಕೆ.ಪ್ರೇಮಕುಮಾರ, ಸಂಗೀತ ನಿರ್ದೇಶಕ ದೇವೇಂದ್ರಕುಮಾರ ಪತ್ತಾರ, ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಂಚಾಲಕ ಡಾ.ವೆಂಕಟಗಿರಿ ದಳವಾಯಿ, ಹಿರೇಹಾಳ್ ಇಬ್ರಾಹಿಂ ಫೌಂಡೇಶನ್ ಅಧ್ಯಕ್ಷ ಎಚ್.ಇ.ದಾದ ಕಲಂದರ್ ಇತರರಿದ್ದರು.