ಹೊಸಪೇಟೆಯಲ್ಲಿ ಜೆಸಿಟಿಯು ಹಾಗೂ ಸಿಐಟಿಯು ನೇತೃತ್ವದಲ್ಲಿ ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಬೃಹತ್ ಜೈಲ್ ಭರೋ ಚಳವಳಿ ನಡೆಯಿತು. ಪ್ರಮುಖರಾದ ಎನ್ ಯಲ್ಲಾಲಿಂಗ, ಆರ್.ಎಸ್.ಬಸವರಾಜ್, ಕೆ.ಎಂ.ಸ್ವಪ್ನ, ಎಲ್.ಮಂಜುನಾಥ್ , ಆರ್ ಭಾಸ್ಕರ್ ರೆಡ್ಡಿ, ಎಂ.ಜಂಬಯ್ಯ ನಾಯಕ್, ಕೆ.ಎಂ.ಸಂತೋಷ್ ಕುಮಾರ್ , ಎಂ.ಗೋಪಾಲ್, ತಾಯಪ್ಪ ನಾಯಕ, ಗೋಣೆಪ್ಪ, ಗಂಟೆ ಸೋಮಶೇಖರ , ಕಣಿಮಪ್ಪ, ದೇವದಾಸಿ ಇತರರಿದ್ದರು. 
ವಿಜಯನಗರ

ಕೇಂದ್ರದ ವಿರುದ್ಧ ಜೈಲ್ ಭರೋ ಚಳವಳಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಬಿಎಸ್ಎನ್ಎಲ್ ಕಚೇರಿ ಮುತ್ತಿಗೆಗೆ ಯತ್ನಿಸಿದ ಸಿಐಇಯು ಕರ‍್ಯರ‍್ತರ ಬಂಧನ
ಹೊಸಪೇಟೆ: ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಇಂದು ಕರ‍್ಪೊರೇಟ್ ಬಂಡವಾಳಶಾಹಿಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಜಂಟಿ ಕರ‍್ಮಿಕ ಸಂಘಟನೆಗಳ ಸಮಿತಿ ಜೆಸಿಟಿಯು ಹಾಗೂ ಸಿಐಟಿಯು ನೇತೃತ್ವದಲ್ಲಿ ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಬೃಹತ್ ‘ಜೈಲ್ ಭರೋ’ ಚಳವಳಿ ನಡೆಯಿತು.
ಪ್ರತಿಭಟನಾಕಾರರು ಕೇಂದ್ರ ರ‍್ಕಾರದ 4 ಲೇಬರ್ ಕೋಡ್ಗಳನ್ನು ರದ್ದುಪಡಿಸಬೇಕು, ರೈತರ ಬಲವಂತದ ಭೂಸ್ವಾಧೀನ ತಡೆಯಬೇಕು, ರಾಜ್ಯಾದ್ಯಂತ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸಬೇಕು ಮತ್ತು ಬೈಕ್ ಟ್ಯಾಕ್ಸಿ ಹಾಗೂ ಖಾಸಗಿ ಆಪ್ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಇಂಧನ ಬೆಲೆ ಏರಿಕೆ, ಉದ್ಯೋಗ ನಷ್ಟ ಹಾಗೂ ಕಟ್ಟಡ ಕರ‍್ಮಿಕರ ಸೆಸ್ ಕಾನೂನು ದರ‍್ಬಲಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣರ‍್ಥ ಕೇಂದ್ರ ಮತ್ತು ರಾಜ್ಯ ರ‍್ಕಾರಗಳ ಕರ‍್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ರೈತರು, ಕರ‍್ಮಿಕರು, ಯುವಜನರು ಹಾಗೂ ವಿದ್ಯರ‍್ಥಿ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನಾ ಸಭೆಯ ನಂತರ ಬಿಎಸ್ಎನ್ ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 150ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.