ಕೊಟ್ಟೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ತಹಸೀಲ್ದಾರ್ ಅಮರೇಶ ಜಿ.ಕೆ., ತಾಪಂ ಇಒ ಡಾ.ಆನಂದ ಕುಮಾರ್, ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ, ವಕೀಲ ಟಿ.ಹನುಮಂತಪ್ಪ, ಬಿಸಿಎಂ ಹಾಸ್ಟೆಲ್ ವಾರ್ಡನ್ ಬಸವರಾಜ್,ಎಸ್ಸಿ-ಎಸ್ಟಿ ಹಾಸ್ಟೆಲ್ ವಾರ್ಡನ್ ಟಿ.ವೀರೇಶ, ಇಸಿಒ ನಿಂಗಪ್ಪ ಇದ್ದರು. 
ವಿಜಯನಗರ

ಸಂವಿಧಾನದದಿಂದಲೇ ಅಂತಾರಾಷ್ಟ್ರೀಯ ಮನ್ನಣೆ

ಅಶೋಕ್ ಕುಮಾರ್ ಎನ್
ಕೊಟ್ಟೂರು: ಸಶಕ್ತವಾದ ಸಂವಿಧಾನದದಿಂದಲೇ ಭಾರತ ಜಾಗತಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬದ್ದಿ ಮರಿಸ್ವಾಮಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ನಿರಂತರ ಅಧ್ಯಯನ ಹಾಗೂ ಪರಿಶ್ರಮದಿಂದ ರಚನೆಯಾಗಿರುವ ಸಂವಿಧಾನವನ್ನು ನಾವೆಲ್ಲಾ ರಕ್ಷಿಸಿ, ಸದಾ ಗೌರವಿಸಬೇಕು ಎಂದರು.
ತಹಸೀಲ್ದಾರ್ ಅಮರೇಶ್ ಜಿ.ಕೆ. ಮಾತನಾಡಿ, ಭಾರತದಲ್ಲಿ ಅನೇಕ ಭಾಷೆ ಮಾತನಾಡುವ ಜನ, ವಿವಿಧ ಧರ್ಮಗಳಿದ್ದರೂ ಎಲ್ಲರೂ ಅನ್ಯೋನ್ಯದಿಂದ ಬದುಕುತ್ತಿರುವುದಕ್ಕೆ ಸಂವಿಧಾನ ಕಾರಣವಾಗಿದೆ ಎಂದರು.
ತಾಪಂ ಇಒ ಡಾ.ಆನಂದ್ ಕುಮಾರ್, ಪಪಂ ಮುಖ್ಯಾಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆಯ ಇಸಿಒ ಎಸ್.ನಿಂಗಪ್ಪ, ದೈಹಿಕ ಶಿಕ್ಷಣ ಪರೀವೀಕ್ಷಕ ಶಶಿಧರ ಮೈದೂರು, ಸನೌಸಂಘದ ತಾಲೂಕು ಅಧ್ಯಕ್ಷ ಯೋಗೀಶ್ವರ ದಿನ್ನೆ, ಸಿಆರ್‌ಪಿ ಅಜೇಯ , ಅಣಿಜಿ ಸಿದ್ದಲಿಂಗಪ್ಪ, ಉಪನ್ಯಾಸಕ ಅಂಜಿನಪ್ಪ, ಶಿಕ್ಷಕ ತೆಗ್ಗಿನಕೇರಿ ಕೊಟ್ರೇಶ್, ಟಿ.ಹನುಮಂತಪ್ಪ ವಕೀಲ, ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಬಿ.ದುರುಗಪ್ಪ ಇತರರಿದ್ದರು.
ಇದಕ್ಕೂ ಮುನ್ನ ಶ್ರೀ ಮರಿಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪಷ್ಪಾರ್ಚನೆ ಮಾಡುವುದರೊಂದಗೆ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.