ಕೂಡ್ಲಿಗಿಯಲ್ಲಿ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕಕ್ಕೆ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಪುಷ್ಪನಮನ ಸಲ್ಲಿಸಿದರು.
ಕೂಡ್ಲಿಗಿ: ಮಕ್ಕಳಲ್ಲಿ ದೇಶ ಪ್ರೇಮ, ಭ್ರಾತೃತ್ವ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ತಾಲೂಕು ಆಡಳಿತ ಹಾಗೂ ಗಾಂಧಿ ಸ್ಮಾರಕ ಸಮಿತಿಯಿಂದ ಪಟ್ಟಣದಲ್ಲಿನ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನೇಕ ಮಹನೀಯರ ಪ್ರಾಣ ತ್ಯಾಗದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಆದರೆ, ಇಂದಿನ ಯುವ ಪೀಳಿಗೆಯಲ್ಲಿ ದೇಶಭಕ್ತಿ ಇಲ್ಲವಾಗಿದೆ. ಮಹಾತ್ಮ ಗಾಂಧಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಟಿ.ಎಂ.ರೋಜರಾಣಿ ಮತ್ತು ವಿದ್ಯಾರ್ಥಿಗಳು ಭಜನೆಗಳನ್ನು ಹಾಡಿದರು. ಹುತಾತ್ಮರ ಗೌರವಾರ್ಥ ರಾಷ್ಟ್ರಧ್ವಜ ಅರ್ಧಕ್ಕೆ ಇಳಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು. ಸರ್ವಧರ್ಮ ಸಂದೇಶ ನೀಡಲಾಯಿತು.
ಸೂಲದಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಕೆ.ಮಧು, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಸಿಪಿಐ ಪಲ್ಹಾದ್ ಆರ್ ಚನ್ನಗಿರಿ, ಬಿಇಒ ಮೈಲೇಶ್ ಬೇವೂರು, ಪ್ರಾಚಾರ್ಯೆ ಟಿ.ಕೊತ್ಲಮ್ಮ, ಬಸವರಾಜ, ಪಪಂ ಮುಖ್ಯಾಧಿಕಾರಿ ಎಚ್.ದಾದಾಪೀರ್, ಸದಸ್ಯರಾದ ಎ.ಎಂ.ರಾಘವೇಂದ್ರ, ವಿರೂಪಾಕ್ಷಮೂರ್ತಿ, ತಾಲೂಕು ಸೇವಾದಳದ ಅಧ್ಯಕ್ಷ ಬ್ಯಾಳಿ ವಿಜಯಕುಮಾರ್ ಗೌಡ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಜಿಲಾನ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ತಳವಾರ ಶರಣಪ್ಪ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಶಿವರಾಜ್, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.