ಹಗರಿಬೊಮ್ಮನಹಳ್ಳಿಯಲ್ಲಿ ಬೆಳದಿಂಗಳ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ದೇವರಾಜ ಗವಾಯಿ ಅವರ ‘ಸಪ್ತ ಸಂಪದ’ ಪುಸ್ತಕ ಬಿಡುಗಡೆ ಮಾಡಲಾಯಿತು. 
ವಿಜಯನಗರ

ಮಕ್ಕಳಲ್ಲಿ ಪುಸ್ತಕಗಳ ಓದಿನ ಆಸಕ್ತಿ ಮೂಡಿಸಿ

ಹಗರಿಬೊಮ್ಮನಹಳ್ಳಿ: ದೇಗುಲ ನಿರ್ಮಾಣವಾದರೆ ಭಿಕ್ಷುಕರು ಹುಟ್ಟುತ್ತಾರೆ. ಗ್ರಂಥಾಲಯ ನಿರ್ಮಿಸಿದರೆ ವಿದ್ವಾಂಸರು ಹುಟ್ಟುತ್ತಾರೆ, ಈ ಮೂಲಕ ಜ್ಞಾನ ಬೆಳೆಯುತ್ತದೆ ಎಂದು ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ನೀರಾವರಿ ಇಲಾಖೆ ಕಚೇರಿ ಆವರಣದಲ್ಲಿ ನವೀನ್ ಸ್ಪೋರ್ಟ್ಸ ಕ್ಲಬ್ ಹಾಗೂ ಡಾ.ಪುಟ್ಟರಾಜ ಕಲಾಸೇವಾ ಬಳಗದಿಂದ ಆಯೋಜಿಸಿದ್ದ ದೇವರಾಜ ಗವಾಯಿ ಅವರ ‘ಸಪ್ತ ಸಂಪದ’ ಪುಸ್ತಕ ಬಿಡುಗಡೆ ಹಾಗೂ ‘ಬೆಳದಿಂಗಳ ಸ್ವರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಪುಸ್ತಕಗಳು ಜ್ಞಾನದ ಭಂಡಾರಗಳಾಗಿದ್ದು, ಮಕ್ಕಳಲ್ಲಿ ಪುಸ್ತಕಗಳ ಓದಿನ ಬಗ್ಗೆ ಆಸಕ್ತಿ ಮೂಡಿಸಿ ಎಂದರು.
ಸಾಹಿತಿ ಮೇಟಿ ಕೊಟ್ರಪ್ಪ ಕವಿ ಹಾಗೂ ಕೃತಿಯ ಪರಿಚಯ ಮಾಡಿದರು. ಸುಕ್ಷೇತ್ರ ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಪಂ.ಪುಟ್ಟರಾಜ ಕಲಾಸೇವಾ ಬಳಗದ ಅಧ್ಯಕ್ಷ ಪಿ.ವೆಂಕಟೇಶ, ಉಪಾಧ್ಯಕ್ಷ ಅನಿಲ್ ಚಿದ್ರಿ, ಕಾರ್ಯದರ್ಶಿ ಅಂಗಡಿ ಮಂಜುನಾಥ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ, ಲೇಖಕ ದೇವರಾಜ ಗವಾಯಿ, ಪ್ರಮುಖರಾದ ಕಿನ್ನಾಳ್ ಸುಭಾಷ್, ಬೆಳಗಲ್ ಹನಮಂತಪ್ಪ ಮತ್ತಿತರರಿದ್ದರು.