ಹೂವಿನಹಡಗಲಿ ತಾಲೂಕಿನ ನಾಗತಿಬಸಾಪುರದ ಶ್ರೀ ಸಾಯಿ ಸನ್ನಿಧಿ ದ್ವಾರಕದಲ್ಲಿ ಆಂಜನೇಯಸ್ವಾಮಿ ಹಾಗೂ ವನದುರ್ಗ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು.  
ವಿಜಯನಗರ

ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

ಅಶೋಕ್ ಕುಮಾರ್ ಎನ್
ಹೂವಿನಹಡಗಲಿ: ನಾಗತಿಬಸಾಪುರದ ಶ್ರೀ ಸಾಯಿಸನ್ನಿಧಿ ದ್ವಾರಕದಲ್ಲಿ ಶನಿವಾರ ಆಂಜನೇಯಸ್ವಾಮಿ ಹಾಗೂ ವನದುರ್ಗ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು.
ಬೆಳಗ್ಗೆ ಗುರುವಂದನೆ, ಗೋಪೂಜೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ವಿಶೇಷ ಪೂಜೆ, ಹೋಮ ನಡೆದ ಬಳಿಕ ಮೂರ್ತಿಗಳ ಪ್ರತಿಷ್ಠಾಪನೆ ಜರುಗಿತು. ಹೂವಿನಹಡಗಲಿ ಶಾಖಾಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಕೊಂಬಳಿ ಚೌಕಿಮಠದ ಗಾಡಿತಾತ, ಹಾಲಸ್ವಾಮಿ ಮಠದ ಗಿರಿರಾಜ ಹಾಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ಬಸವಕಲಾ ಬಳಗದ ಸದಸ್ಯರು ಸಂಗೀತ ಪ್ರಸ್ತುತಪಡಿಸಿದರು.