ಹೊಸಪೇಟೆ ಡಿಆರ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ವಸತಿ ಗೃಹಗಳ ಕಾಮಗಾರಿಗೆ ಶಾಸಕ ಎಚ್.ಅರ್.ಗವಿಯಪ್ಪ ಭೂಮಿಪೂಜೆ ನೆರವೇರಿಸಿದರು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಡಾ.ಟಿ.ಮಂಜುನಾಥ ಇತರರಿದ್ದರು
- ಪೊಲೀಸ್ ವಸತಿ ಗೃಹಗಳ ಕಾಮಗಾರಿಗೆ ಶಾಸಕ ಎಚ್.ಆರ್.ಗವಿಯಪ್ಪ ಭೂಮಿಪೂಜೆ
ಹೊಸಪೇಟೆ: ನೂತನ ಜಿಲ್ಲೆಯಲ್ಲಿ ಮನೆಗಳ ಬಾಡಿಗೆ ಹೆಚ್ಚಾಗಿದ್ದು, ಪೊಲೀಸರು ಪರದಾಡುವಂತಾಗಿದೆ. ಆದ್ದರಿಂದ ಆದಷ್ಟು ಬೇಗ ಹೆಚ್ಚಿನ ವಸತಿ ಗೃಹಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಎಚ್.ಆರ್.ಗವಿಯಪ್ಪ ಭರಸವಸೆ ನೀಡಿದರು.
ನಗರದ ಡಿಆರ್ ಮೈದಾನದಲ್ಲಿ ಮಂಗಳವಾರ 6.69 ಕೋಟಿ ರೂ. ವೆಚ್ಚದ ಪೊಲೀಸ್ ವಸತಿ ಗೃಹಗಳಿಗೆ
ಶಾಸಕ ಎಚ್.ಅರ್.ಗವಿಯಪ್ಪ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವರೆಗೆ 36 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಈಗ 12 ಪಿಸಿ ಹಾಗೂ 6 ಎಸ್ಐ ಒಟ್ಟು 18 ವಸತಿ ಗೃಹಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಜಿಲ್ಲಾ ಕೇಂದ್ರವಾಗಿರುವುದರಿಂದ 142 ವಸತಿ ಗೃಹಗಳ ಅವಶ್ಯಕತೆಯಿದೆ. ಮತ್ತೆ 32 ವಸತಿ ಗೃಹ ಗಳಿಗೆ ಗೃಹ ಸಚಿವರಿಗೆ ಮನವಿಪತ್ರ ಸಲ್ಲಿಸಲಾಗುವುದು. ಪೊಲೀಸರಿಗೆ ವಸತಿ ಹಾಗೂ ಮುಲಸೌಕರ್ಯ ಒದಗಿಸುವುದು ನನ್ನ ಗುರಿಯಾಗಿದೆ ಎಂದರು.
ಮಹಿಳಾ ಪೊಲೀಸ್ ಠಾಣೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಜಿಲ್ಲಾ ಆಸ್ಪತ್ರೆ ಶೀಘ್ರದಲ್ಲೇ ಉದ್ಘಾಟನೆ ಮಾಡುವುದು. ಉಪ ಚುನಾವಣೆ ಫಲಿತಾಂಶ ಗ್ಯಾರಂಟಿ ಯೋಜನೆಗಳಿಗೆ ಸಂದ ಜಯವಾಗಿದೆ. ಈ ಚುನಾವಣೆಯಲ್ಲಿ ಮತದಾರರು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ ಎಂದರು.
ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಡಾ.ಟಿ.ಮಂಜುನಾಥ, ಪಿಐಗಳಾದ ಡಿ.ಹುಲುಗಪ್ಪ, ಮಹಮದ್ ಗೌಸ್, ಫೈಜುಲ್ಲ, ಗುರುರಾಜ್ ಕಟ್ಟಿಮನಿ, ಸೋಮ್ಲನಾಯ್ಕ, ಗೋವಿಂದ್ ಪ್ರಮುಖರಾದ ದೇವರಮನಿ ಬಸವರಾಜ, ಗುಜ್ಜಲ ನಿಂಗಪ್ಪ, ಗಿಂಜಿ ಮಂಜುನಾಥ, ತಳವಾರ ನಾಗರಾಜ, ಧನಲಕ್ಷ್ಮಿ, ಬಿ.ಚಂದ್ರಶೇಖರ್ ಇತರರಿದ್ದರು.