ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಆಶಾ ಕಾರ್ಯಕರ್ತೆಯರುಗೌರವಧನಹೆಚ್ಚಿಸುವ ಸಲುವಾಗಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ನೇತೃತ್ವದಲ್ಲಿಆಶಾ ಕಾರ್ಯಕರ್ತರಿಂದ ನಗರದಜಿಲ್ಲಾಧಿಕಾರಿಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.
ಕಳೆದ ವರ್ಷ ಜ.11 ರಂದು ಸಿಎಂಸಿದ್ದರಾಮಯ್ಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಒಕ್ಕೂಟದ ಸಭೆ ನಡೆಸಿ ಆಶಾ ಕಾರ್ಯಕರ್ತೆಯರಗೌರವಧನವನ್ನು10 ಸಾವಿರಕ್ಕೆ ಹೆಚ್ಚಿಸುವುದಾಗೆ ಸಿಎಂ ಭರವಸೆಕೊಟ್ಟಿದ್ದರು.ಆದರೆಒಂದು ವರ್ಷ ಕಳೆದರೂ ಇದುಕಾರ್ಯರೂಪಕ್ಕೆಬಂದಿಲ್ಲ, ಇಂದಿಗೂ ಆಶಾ ಕಾರ್ಯಕರ್ತೆಯರು 8 ಸಾವಿರರೂ.ಮಾಸಿಕ ಗೌರವಧನಕ್ಕೆದುಡಿಯುತ್ತಿದ್ದಾರೆ.ಅದಾದಬಳಿಕ ಗೌರವಧನಏರಿಕೆ ಮಾಡುವಂತೆಆಗಸ್ಟ್ನಲ್ಲಿ ಹಾಗೂ ಚಳಿಗಾಲದ ಅಧಿವೇಶನದ ವೇಳೆ ಡಿಸೆಂಬರ್‌ನಲ್ಲಿಯೂಪ್ರತಿಭಟನೆ ನಡೆಸಿದ್ದರೂ ಕೂಡಾ ಪ್ರಯೋಜನವಾಗಿಲ್ಲಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರಿಗೆ ಮಾಸಿಕ15 ಸಾವಿರರೂ. ಗೌರವಧನ ನಿಗದಿಪಡಿಸಬೇಕು. ನಗರ ಭಾಗಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ 2 ಸಾವಿರರೂಅಂದರೆಒಟ್ಟು17 ಸಾವಿರರೂಗೌರವಧನಕೊಡಬೇಕು. ಜನ ಸಂಖ್ಯೆಯನ್ನು ತರ್ಕಬದ್ಧಗೊಳಿಸುವ ಹೆಸರಲ್ಲಿ ಸಾವಿರಾರು ಆಶಾಗಳನ್ನುಕೈಬಿಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು.ಜತೆಗೆ ಹೆಚ್ಚುವರಿ ಕೆಲಸಗಳಿಗೆ ಪ್ರೋತ್ಸಾಹಧನ, ಗಂಭೀರಅನಾರೋಗ್ಯದಕಾರಣಆಸ್ಪತ್ರೆಗೆದಾಖಲಾದರೆ, 3 ತಿಂಗಳವೇತನ ಸಹಿತರಜೆ ನೀಡಬೇಕುಎಂದು ಒತ್ತಾಯಿಸಿಸರು.