ಕಾನಮಡಗು ಗ್ರಾಮದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ನೈಸರ್ಗಿಕ ಮತ್ತು ಸಾವಯವ ಕೃಷಿ ಕಾರ್ಯಾಗಾರವನ್ನು ಮೋರ್ಚಾ ಜಿಲ್ಲಾಧ್ಯಕ್ಷ ಹೊಂಬಾಳೆ ರೇವಣ್ಣ ಉದ್ಘಾಟಿಸಿದರು.
ಕೂಡ್ಲಿಗಿ: ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಪರಿಸರ ಸಮತೋಲನವನ್ನು ಸುಸ್ಥಿರಗೊಳಿಸುವುದು ಸಾವಯವ ಕೃಷಿಯ ಧ್ಯೇಯವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಹೊಂಬಾಳೆ ರೇವಣ್ಣ ಹೇಳಿದರು.
ಕಾನಮಡುಗು ಗ್ರಾಮದ ಶರಣಬಸವೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ‘ನೈಸರ್ಗಿಕ ಮತ್ತು ಸಾವಯವ ಕೃಷಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಮಣ್ಣಿನ ಫಲವತ್ತತೆ ಮತ್ತು ರೈತರ ಉತ್ಪಾದಕತೆ ಹೆಚ್ಚಿಸುವಲ್ಲಿ ಸಾವಯವ ಕೃಷಿ ಸಂಪೂರ್ಣ ಸಹಾಯಕವಾಗುತ್ತದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಾವಯವ ಕೃಷಿ ಇನ್ನಷ್ಟು ಲಾಭದಾಯಕವಾಗಲಿದೆ ಎಂದರು.
ಸಾವಯವ ವಿಧಾನವನ್ನು ಬಳಸಿಕೊಂಡು ಕೃಷಿ ಮಾಡುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದಲ್ಲದೆ, ರೈತರ ಆದಾಯವೂ ಹೆಚ್ಚಾಗುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ, ಮಣ್ಣಿನ ಸಂರಕ್ಷಣೆ ಮತ್ತು ಮಾನವನ ಆರೋಗ್ಯಕ್ಕೆ ಸಾವಯವ ಕೃಷಿ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.
ಕಾನಮಡುಗು ದಾಸೋಹ ಮಠದ ಶರಣಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾವಯವ ಕೃಷಿಕ ವಿಶ್ವೇಶರ ಸಜ್ಜನ್, ಪ್ರಗತಿಪರ ರೈತರಾದ ಕೆ.ಎಂ.ಶಶಿಧರ, ಷಣ್ಮುಖಣ್ಣ, ನಿಂಬಳಗೆರೆ ಕಲ್ಲೇಶಪ್ಪ, ತೂಲಹಳ್ಳಿ ಹೇಮಣ್ಣ, ಭರಮನಗೌಡ ಪಾಟೀಲ್, ರೇಖಾ ಮಲ್ಲಿಕಾರ್ಜುನ, ಆಲೂರು ಮಲ್ಲಿಕಾರ್ಜುನ, ಪದ್ಮನಾಭ ರೆಡ್ಡಿ, ಸಿರಾಜುದ್ದೀನ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಯಜಮಾನಪ್ಪ, ನಿಂಬಳೆಗೆರೆ ರಾಜಣ್ಣ, ಕಟ್ಟೆ ಈಶ್ವರಪ್ಪ, ಕಾನಮಡಗು ಸುರೇಶ್, ಜಯಣ್ಣ, ದಿನೇಶ್, ನಾಗಭೂಷಣ, ಗೀತಾ ಇತರರಿದ್ದರು.