ಹೊಸಪೇಟೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬುಧವಾರ ಎಸ್ಪಿ ಎಸ್.ಜಾಹ್ನವಿ ರೌಡಿ ಪರೇಡ್ ನಡೆಸಿದರು. ಎಎಸ್ಪಿ ಮಂಜುನಾಥ, ಡಿವೈಎಸ್ಪಿಗಳಾದ ಡಾ.ಟಿ.ಮಂಜುನಾಥ, ಸಂತೋಷ್ ಚವ್ಹಾಣ್ ಇತರರಿದ್ದರು.
- ರೌಡಿ ಪರೇಡ್‌ನಲ್ಲಿ ಎಸ್ಪಿ ಎಸ್.ಜಾಹ್ನವಿ ಎಚ್ಚರಿಕೆ
ಹೊಸಪೇಟೆ: ಈ ಹಿಂದೆಗಿಂತ ಬಹಳ ಕಡಿಮೆ ಜನರು ಸುಧಾರಿಸಿದಂತೆ ಕಾಣುತ್ತಿದೆ. ಆದರೆ, ಇನ್ನುಳಿದವರು ಬದಲಾಗಿಲ್ಲ. ಇನ್ನು ಮುಂದೆ ನಿಮ್ಮ ಮೇಲಿನ ನಿಗಾ ತೀವ್ರವಾಗುತ್ತದೆ. ನಿಮ್ಮಿಂದ ಸಮಾಜದಲ್ಲಿ ಯಾರಿಗಾದರೂ ಸಣ್ಣ ತೊಂದರೆಯಾದರೂ ನಾವು ಸುಮ್ಮನಿರುವುದಿಲ್ಲ ಎಂದು ರೌಡಿಶೀಟರ್‌ಗಳಿಗೆ ಎಸ್ಪಿ ಎಸ್.ಜಾಹ್ನವಿ ಎಚ್ಚರಿಕೆ ನೀಡಿದರು.
ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಬುಧವಾರ ನಡೆದ ರೌಡಿ ಪರೇಡ್‌ನಲ್ಲಿ ಜಿಲ್ಲೆಯ 21 ಪೊಲೀಸ್ ಠಾಣೆಗಳ ವ್ಯಾಪ್ತಿಯ ಸುಮಾರು 200ಕ್ಕೂ ಹೆಚ್ಚು ರೌಡಿಶೀಟರ್‌ಗಳಿಗೆ ಬಿಸಿ ಮುಟ್ಟಿಸಿದರು.
ನೀವು ಮಾಡಿದ ಹಳೇ ತಪ್ಪುಗಳಿಂದಲೇ ಇವತ್ತು ಇಲ್ಲಿ ಬಂದು ನಿಲ್ಲುವಂತಾಗಿದೆ. ಸುಧಾರಿಸಿಕೊಳ್ಳಲು ಪ್ರತಿದಿನ ಅವಕಾಶವಿರುತ್ತದೆ, ಅದನ್ನು ಬಳಸಿಕೊಂಡು ಒಳ್ಳೆ ಬದುಕು ನಡೆಸಿ. ನಿಮ್ಮಿಂದ ಸಮಾಜದಲ್ಲಿ ಯಾರಿಗಾದರೂ ಸಣ್ಣ ತೊಂದರೆಯಾದರೂ ನಾವು ಸುಮ್ಮನಿರುವುದಿಲ್ಲ. ಬದಲಾಗದಿದ್ದರೆ ಜಿಲ್ಲೆಯಿಂದಲೇ ನಿಮ್ಮನ್ನು ಗಡಿಪಾರು ಮಾಡುವುದು ಖಚಿತ ಎಂದರು.
ಭಯೋತ್ಪಾದಕ ಕೃತ್ಯದ ಆರೋಪ ಎದುರಿಸಿ ಖುಲಾಸೆಯಾಗಿದ್ದ ಅಸಾದುಲ್ಲಾ ಎಂಬಾತನಿಗೆ, ಸರಿಯಾಗಿ ನಿಲ್ಲುವುದನ್ನು ಮೊದಲು ಕಲಿ, ಓವರ್ ಸ್ಮರ‍್ಟ್ ಆಗಿ ಆಡಬೇಡ ಎಂದರು. ಇನ್ನೋಬ್ಬ ರೌಡಿಶೀಟರ್‌ಗೆ ಗಡ್ಡ-ಮೀಸೆ ಬಿಟ್ಟು ಅಸಭ್ಯವಾಗಿ ಬಂದ ಇನ್ನೋಬ್ಬ ರೌಡಿಶೀಟರ್‌ಗೆ ಮೊದಲು ನೀನು ಹೋಗಿ ಕಟಿಂಗ್ ಮಾಡಿಕೊ ಎಂದು ಗದರಿಸಿದರು. ಪರೇಡ್‌ಗೆ ಕುಡಿದು ಬಂದಿದ್ದ ಹಾಗೂ ಮೈಮೇಲೆ ಅಚ್ಚೆ ಹಾಕಿಸಿಕೊಂಡು ಸ್ಟೆöÊಲ್ ಮಾಡುತ್ತಿದ್ದವನಿಗೆ ಬೆವರಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಪರಾಧ ಕೃತ್ಯಗಳಲ್ಲಿ ಸಕ್ರಿಯರಾಗಿರುವ 15ಕ್ಕೂ ಹೆಚ್ಚು ರೌಡಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಈಗಾಗಲೇ ತರ‍್ಮಾನಿಸಲಾಗಿದೆ. ಕೇವಲ ಚಲನವಲನ ಮಾತ್ರವಲ್ಲದೆ, ರೌಡಿಗಳ ರ‍್ಥಿಕ ಮೂಲಗಳ ಮೇಲೆಯೂ ಇಲಾಖೆ ನಿರಂತರ ಕಣ್ಗಾವಲು ಇರಿಸಿದೆ. ಹಳೆಯ ಪ್ರಕರಣಗಳ ಹಿನ್ನೆಲೆಯಲ್ಲಿ ಎಲ್ಲರ ವಿಚಾರಣೆ ನಡೆಸಲಾಗಿದ್ದು, ಮೇಜರ್ ಆಕ್ಟಿವಿಟೀಸ್‌ನಲ್ಲಿ ತೊಡಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.