ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಹೊಸಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.ನಗರದ ಚಿಂತಾಮಣಿ ಮಠ ಶಿವಾನಂದಾ ಭಾರತಿ ಸ್ವಾಮಿಜಿ, ಹಂಪಿಯ ಮಾತಂಗಿ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ರೇವಣ ಸಿದ್ದಪ್ಪ, ಅಪ್ಪರಾವ್ ಸಾನಬಾಳ್ ಇತರರಿದ್ದರು.
- ಉದಯನಿಧಿ ಸ್ಟ್ಯಾಲಿನ್ ವಿರುದ್ದ ನಡೆದ ಪಂಜಿನ ಮೆರವಣಿ ವೇಳೆ ಭಾಷಣಕಾರ ರಾಹುಲ್ ದೇವರಾಜ್ ಕರೆ
ಹೊಸಪೇಟೆ: ಸನಾತನ ಹಿಂದೂ ಧರ್ಮದ ಕುರಿತು ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟ್ಯಾಲಿನ್ ಅವಹೇಳನ ಹೇಳಿಕೆ ವಿರುದ್ಧ ನಗರದಲ್ಲಿ ಶುಕ್ರವಾರ ಹಿಂದೂ ಸನಾತನ ಸಂರಕ್ಷಣಾ ಸಮಿತಿಯಿಂದ ಪಂಜಿನ ಮೆರವಣಿಗೆ ನಡೆಯಿತು.
ನಗರದ ವಡಕರಾಯ ವೃತ್ತದಿಂದ ಮೇನ್ ಬಜಾರ್, ದೊಡ್ಡ ಮಸೀದಿ, ಗಾಂಧಿಚೌಕು, ಪುಣ್ಯಮೂತಿ, ಕೇಂದ್ರ ಬಸ್ ನಿಲ್ದಾಣ, ಮಾರ್ಗವಾಗಿ ಪುನೀತ್ ರಾಜಕುಮಾರ್ ವೃತ್ತದ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಸ್ವಾಮೀಜಿಗಳು,
ಹಿಂದೂ ಪರ ಸಂಘಟನೆ ಪದಾಧಿಕಾರಿಗಳು ಹಾಗೂ ವಿವಿಧ ಸಮುದಾಯಗಳ ಜನರು ಪಂಜಿನ ಮೆರವಣಿಗೆ ನಡೆಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಶಿವಮೊಗ್ಗದ ವೈದ್ಯ ಹಾಗೂ ಭಾಷಣಕಾರ ರಾಹುಲ್ ದೇವರಾಜ್ ಮಾತನಾಡಿ, ಸನಾತನ ಧರ್ಮ ನಾಶ ಮಾಡಲು ಯಾರಿಂದಲೂ ಸಾದ್ಯವಿಲ್ಲ. ಮಣ್ಣು, ಮರ-ಗಿಡ, ಗಾಳೆ, ಬೆಂಕಿ ಸೇರಿ ಪ್ರಕೃತಿಯನ್ನು ಪೂಜೆ ಮಾಡುವವರು ಹಿಂದೂಗಳು ಮಾತ್ರ. ಸನಾತನ ಧರ್ಮವು ಹಿಂದೂ ಧರ್ಮದ ಅತ್ಯಂತ ಪುರಾತನ ಮತ್ತು ಶಾಶ್ವತವಾದ ನಂಬಿಕೆಯಾಗಿದೆ.
ಇದನ್ನು ಶಾಶ್ವತ ಧರ್ಮ ಅಥವಾ ಸಾರ್ವತ್ರಿಕ ನಿಯಮ ಎಂದು ಕರೆಯಲಾಗುತ್ತದೆ. ಸತ್ಯ, ಅಹಿಂಸೆ, ಪವಿತ್ರತೆ, ಮತ್ತು ಕರ್ತವ್ಯನಿಷ್ಠೆಯಂತಹ ಜೀವನ ಮೌಲ್ಯಗಳನ್ನು ಬೋಧಿಸುತ್ತದೆ. ಆದರೆ, ಈಗ ಸಮಾಜದಲ್ಲಿ ಸನಾತನ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವವರ ವಿರುದ್ಧ ನಾವು ಹೋರಾಟ ಮಾಡಬೇಕಿದೆ.
ಧರ್ಮ ರಕ್ಷಣೆಗೆ ಒಗ್ಗಟ್ಟಾಗಿ ಬದುಕಬೇಕಿದೆ. ಶಾಂತಿಯ ಜತೆ ಶಕ್ತಿ ಇದ್ದರೆ ಮಾತ್ರ ಧರ್ವ ರಕ್ಷಣೆ ಮಾಡಲು ಸಾದ್ಯ. ದುಷ್ಟ ಮನಸ್ಥಿತಿ ಇರುವ ನಮ್ಮವರನ್ನು ಪಾಠ ಕಲಿಸುವಂತಾಗಬೇಕು. ನಮ್ಮಲ್ಲಿರುವ ಟೊಳ್ಳು ಜನರಿಗೆ ಧರ್ಮದ ಜಾಗೃತಿ ಮೂಡಿಸಬೇಕಿದೆ. ನಮ್ಮ ಭವಿಷ್ಯದ ಮಕ್ಕಳ್ಳಿಗೆ ನಮ್ಮ ಸಂಸ್ಕೃತಿ ಕಲಿಸಬೇಕಿದೆ. ದೇಶ, ಧರ್ಮದ ಅಭಿಮಾನ ತೋರಿಸುವ ಗುಣ ನಮ್ಮಲಿರಲಿ ಎಂದರು.
ನಗರದ ಚಿಂತಾಮಣಿ ಮಠ ಶಿವಾನಂದಾ ಭಾರತಿ ಸ್ವಾಮಿಜಿ, ಹಂಪಿಯ ಮಾತಂಗಿ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಹಿಂದೂ ಸನಾತನ ಸಂರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಅಶೋಕ್ ಜೀರೆ, ಪ್ರಮುಖರಾದ ರೇವಣ ಸಿದ್ದಪ್ಪ, ಅಪ್ಪರಾವ್ ಸಾನಬಾಳ್, ಅಶೋಕ್ ಮೋದಿ, ರೂಪೇಶ್ ಕುನಾರ್, ಭುಪಾಲ್ ಪ್ರಹಲಾದ್, ಗೊಗ್ಗ ಚನ್ನಬಸವರಾಜ್, ರಾಮ್ ಜಿನಾಯ್ಕ ಇತರರಿದ್ದರು.
ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಅವರ ಮೂಲಕ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಮನವಿ ರವಾನಿಸಿದರು. ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.