ಇಂಡಿ ನಗರದ ಸ್ಪಂದನಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಸಂಗಮೇಶ ಕಕ್ಕಳಮೇಲಿ, ಭೀಮಣ್ಣ ಕವಲಗಿ, ಡಾ. ಐಶ್ವರ್ಯ ಹೊನವಾಡ, ಡಾ. ಮಯೂರಿ ಧನಶೆಟ್ಟಿ ಮತ್ತಿತರರಿದ್ದರು. 
ವಿಜಯನಗರ

ಹೆಣ್ಣು ಹುಟ್ಟಿದರೆ ಮನೆಗೆ ಹೊನ್ನು ಬಂದಂತೆ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ
  • ಮಹಿಳಾ ದಿನಾಚರಣೆ
ಇಂಡಿ: ಸ್ಪಂದನಾ ಆಸ್ಪತ್ರೆಯಿಂದ ಹೆಣ್ಣು ಮಗು ಜನಿಸಿದರೆ ಹೆರಿಗೆ ಖರ್ಚು ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದು ಇದು ಅತ್ಯಂತ ಸಂತಸದ ಸಂಗತಿ. ತಾಲೂಕಿನ ಜನರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಇಂದಿನ ಕಾಲದಲ್ಲಿ ಮಹಿಳೆ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಿದ್ದು ಇಂದು ಹೆಣ್ಣು ಹುಟ್ಟಿದರೆ ಮನೆಗೆ ಹೊನ್ನು ಬಂದಂತೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಸ್ಪಂದನಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ ಹೆಣ್ಣು ಮಗು ಸಹಜವಾಗಿಯಾಗಲಿ ಅಥವಾ ಶಸ್ತ್ರಚಿಕಿತ್ಸೆ ಮುಖಾಂತರವಾಗಲಿ ಜನಿಸಿದರೆ ಹೆರಿಗೆ ಖರ್ಚು ಉಚಿತ ಎಂದು ಘೋಷಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಿಜೇರಿಯನ್‌ಗೆ ಕನಿಷ್ಠ 50 ಸಾವಿರ ರೂ. ಖರ್ಚಾಗುತ್ತದೆ. ಆದರೆ ಹೆಣ್ಣು ಸಂತಾನದ ಬಗ್ಗೆ ಕಾಳಜಿ ವಹಿಸಿದ ಸ್ಪಂದನಾ ಆಸ್ಪತ್ರೆ ಉಚಿತ ಹೆರಿಗೆ ಚಿಕಿತ್ಸೆ ನೀಡಲು ನಿರ್ಧರಿಸಿದ್ದು ಸ್ವಾಗತಾರ್ಹ ಎಂದರು.
ಬುರಾಣಪುರ ಆರೂಢಮಠದ ಯೋಗೇಶ್ವರಿ ಮಾತಾಜಿ ಮಾತನಾಡಿ, ಹೆಣ್ಣು ಹುಟ್ಟಿದರೆ ಹೆರಿಗೆ ಉಚಿತ ಎಂಬ ವಿಷಯ ಪ್ರತಿ ಮನೆ ತಲುಪಬೇಕು. ಎಲ್ಲ ಕಡೆಗೂ ಪ್ರಚಾರವಾಗಬೇಕು. ಈ ವಿಷಯ ಮಹಿಳೆ ಆಸಕ್ತಿ ವಹಿಸಿ ಎಲ್ಲರಿಗೂ ತಿಳಿ ಹೇಳಬೇಕು ಎಂದರು.
ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ಭೀಮಾಶಂಕರ ಮುರಗುಂಡಿ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಅಜೀತ ಧನಶೆಟ್ಟಿ, ಡಾ. ಲಕ್ಷ್ಮೀಕಾಂತ ಮೇತ್ರಿ, ಡಾ. ಪ್ರೀತಿ ಕೋಳೆಕರ, ಶರಣಬಸು ಕಾಂಬಳೆ, ಪ್ರೀತಿ ಮುಜಗೊಂಡ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಆಯ್ಕೆಯಾದ ಅಜೀತ ಧನಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಶ ಕೋಳೆಕರ, ರಾಜೇಶ್ವರಿ ಕ್ಷತ್ರಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಸವರಾಜ ರಾವೂರ, ಸಂಗಮೇಶ ಕಕ್ಕಳಮೇಲಿ, ಭೀಮಣ್ಣ ಕವಲಗಿ, ಡಾ. ಐಶ್ವರ್ಯ ಹೊನವಾಡ, ಡಾ. ಮಯೂರಿ ಧನಶೆಟ್ಟಿ, ಯಾಶೀನ ಅರಬ, ಡಾ. ರಮೇಶ ಪೂಜಾರಿ, ದತ್ತಾತ್ರೇಯ ಪಾಟೀಲ ಮತ್ತಿತರರಿದ್ದರು.