ಹೂವಿನಹಡಗಲಿಯಲ್ಲಿ ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ರಂಪಾಟ ಮಾಡಿದ ಮಹಿಳೆಯನ್ನು ಪೊಲೀಸರು ಸಮಾಧಾನ ಪಡಿಸುತ್ತಿರುವುದು.  
ವಿಜಯನಗರ

ನನಗೆ ಚಾಲಕನ ಸೀಟ್ ಬೇಕು !

ಹೂವಿನಹಡಗಲಿ: ಚಾಲಕನ ಸೀಟ್ ಬಿಟ್ಟುಕೊಡಬೇಕು ಇಲ್ಲದಿದ್ದರೆ ಬಸ್ ಬಾಗಿಲಲ್ಲೇ ಮಲಗುವೆ ಎಂದು ಮಹಿಳೆ ಹಠ ಹಿಡಿದ ಘಟನೆ ಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮದ್ಯ ಸೇವಿಸಿದ್ದ ಮಹಿಳೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ತೆರಳಲು ಟಿಕೇಟ್ ಪಡೆದಿದ್ದರು. ಪಟ್ಟಣದ ಬಸ್ ನಿಲ್ದಾಣದಿಂದ ಬಸ್ ಹೊರಡುತ್ತಿದಂತೆ ಚಾಲಕ ಸೀಟ್ ಬಿಟ್ಟುಕೊಡುವಂತೆ ಒತ್ತಾಯಿಸಿ ಸಿಟ್ ಪಕ್ಕದಲ್ಲಿಯೇ ಮಲಗಿದ್ದಾರೆ. ನಂತರ ಬಸ್ ಅನ್ನು ಪೊಲೀಸ್ ಠಾಣೆ ಬಳಿ ನಿಲ್ಲಿಸಿ ಪೊಲೀಸರನ್ನು ಕರೆಯಿಸಲಾಯಿತು. ಆದರೂ, ಮಹಿಳೆ ಹಠ ಹಿಡಿದು ಬಸ್ ಬಾಗಿಲಿನಲ್ಲೇ ಮಲಗಲು ಮುಂದಾದರು. ನಂತರ ಪ್ರಯಾಣಿಕರು ಮಹಿಳೆಗೆ ಒಂದು ಪೂರ್ಣ ಸೀಟ್ ಬಿಟ್ಟುಕೊಟ್ಟರು. ಆಗ ಮಹಿಳೆ ಪಟ್ಟು ಸಡಿಲಿಸಿ ಸುಮ್ಮನಾದರು.