ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ನಡೆದ ಡಾ.ಬಸವರಾಜ ಮಲಶೆಟ್ಟಿ ದತ್ತಿ ನಿಧಿಯ ವಿಚಾಗೋಷ್ಠಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಉದ್ಘಾಟಿಸಿದರು. ಪ್ರಾಂಶುಪಾಲ ಮಹಾಂತೇಶ ಆರಾಧ್ಯಮಠ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ರವೀಂದ್ರನಾಥ ಇತರರಿದ್ದರು.
- ಶರಣ ಚಿಂತಕ ಡಾ.ಎಸ್. ಶಿವಾನಂದ ಅಭಿಮತ
ಹೊಸಪೇಟೆ: ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದಿಂದ ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಮಂಗಳವಾರ ನಡೆದ ಡಾ.ಬಸವರಾಜ ಮಲಶೆಟ್ಟಿ ದತ್ತಿ ನಿಧಿಯ ವಿಚಾಗೋಷ್ಠಿ ನಡೆಯಿತು.
ಶರಣ ಚಿಂತಕ ಡಾ.ಎಸ್.ಶಿವಾನಂದ ಮಾತನಾಡಿ, ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಡಾ.ಬಸವರಾಜ ಮಲಶೆಟ್ಟಿ ಮಾನವೀಯತೆಯ ವಿದ್ವಾಂಸರಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಉದ್ಘಾಟಿಸಿದರು. ಪ್ರಾಂಶುಪಾಲ ಮಹಾಂತೇಶ ಆರಾಧ್ಯಮಠ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೆ.ರವೀಂದ್ರನಾಥ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಘಟಕದ ಅಧ್ಯಕ್ಷ ಮಾವಿನಹಳ್ಳಿ ಬಸವರಾಜ, ಪ್ರಮುಖರಾದ ಡಾ.ಮೌನೇಶ ಬಡಿಗೇರ, ಕೋರಿಶೆಟ್ಟಿ ಲಿಂಗಪ್ಪ, ಶಿವಾನಂದ ಕಿನ್ನಾಳ, ಗೊಗ್ಗ ಚನ್ನಬಸವರಾಜು, ಕಾಮರೆಡ್ಡಿ ಇತರರಿದ್ದರು.