ಕನ್ನಡ ವಿವಿಯ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಶಾಸಕರಾದ ಎಚ್.ಆರ್.ಗವಿಯಪ್ಪ, ಎನ್.ಟಿ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಅತಿಥಿ ಉಪನ್ಯಾಸಕರಾದ ಡಾ.ತಿಮ್ಮಣ್ಣ ಭೀಮರಾಯ, ಡಾ.ಕೃಷ್ಣೆಗೌಡ, ಸಿದ್ರಾಮೇಶ್, ವಿರೂಪಾಕ್ಷಪ್ಪ ಇಟಗಿ, ತಾತ್ಕಾಲಿಕ ಆಡಳಿತ ಸಿಬ್ಬಂದಿಗಳಾದ ಡಾ.ಎ.ನಾಗವೇಣಿ, ಶ್ರೀನಿವಾಸ ಕೆ.ಕಲಾಲ್, ಜೆ.ಬಸವರಾಜ, ಜೆ.ಶಿವಕುಮಾರ, ಬಿ.ಗಂಗಾಧರ, ಮಹ್ಮದ್‌ಶಫಿ ಇತರರಿದ್ದರು.
- ಬಾಕಿ ವೇತನಕ್ಕಾಗಿ ಶಾಸಕರಿಗೆ ಎಚ್.ಆರ್.ಗವಿಯಪ್ಪ ಅವರಲ್ಲಿ ಕನ್ನಡ ವಿವಿಯ 86 ಸಿಬ್ಬಂದಿಗಳ ಅಳಲು
ಹೊಸಪೇಟೆ: ಬಾಕಿ ವೇತನ ಪಾವತಿಗಾಗಿ ಕನ್ನಡ ವಿವಿಯ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿಯಿAದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹಾಗೂ ಶಾಸಕರಾದ ಎಚ್.ಆರ್.ಗವಿಯಪ್ಪ, ಎನ್.ಟಿ.ಶ್ರೀನಿವಾಸ್ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ರವಾನಿಸಿದರು.
ಕನ್ನಡ ಭಾಷೆ, ಸಂಸ್ಕೃತಿ ಮತ್ತು ಇತಿಹಾಸ ಸಂಶೋಧನೆಗೆ ಮೀಸಲಾದ ರಾಜ್ಯದ ಹೆಮ್ಮೆಯ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಕಳೆದ ಹಲವು ತಿಂಗಳುಗಳಿAದ ವೇತನವಿಲ್ಲದೆ ಕಂಗಾಲಾಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ವೇತನ ಬಿಡುಗಡೆಗಾಗಿ ಸರ್ಕಾರದಿಂದ ವಿಶೇಷ ಅನುದಾನ ಒದಗಿಸುವಂತೆ ಆಗ್ರಹಿಸಿದರು.
ವಿವಿಯಲ್ಲಿ ಕಳೆದ ಹತ್ತರಿಂದ ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 14 ಅತಿಥಿ ಉಪನ್ಯಾಸಕರಿಗೆ ಹಿಂದಿನ 11 ತಿಂಗಳ ಬಾಕಿ ಹಾಗೂ ಪ್ರಸ್ತುತ ಸಾಲಿನ 4 ತಿಂಗಳು ಸೇರಿದಂತೆ ಬರೋಬ್ಬರಿ 15 ತಿಂಗಳಿನಿAದ ಗೌರವಧನ ಸಂದಾಯವಾಗಿಲ್ಲ. ಮತ್ತೊಂದೆಡೆ, ಹದಿನೈದು ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 72 ತಾತ್ಕಾಲಿಕ ಆಡಳಿತ ಸಿಬ್ಬಂದಿಗೂ ಹಿಂದಿನ 7 ತಿಂಗಳು ಮತ್ತು ಪ್ರಸ್ತುತ 4 ತಿಂಗಳು ಸೇರಿ ಒಟ್ಟು 11 ತಿಂಗಳುಗಳಿAದ ವೇತನ ಲಭಿಸಿಲ್ಲ. ಇದರಿಂದಾಗಿ ನಿತ್ಯದ ಜೀವನ ನಿರ್ವಹಣೆ, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಆಸ್ಪತ್ರೆ ವೆಚ್ಚಗಳನ್ನು ಭರಿಸಲಾಗದೆ ನೌಕರರು ಸಾಲದ ಸುಳಿಗೆ ಸಿಲುಕಿದ್ದಾರೆ.
ವಿವಿ ಸರ್ಕಾರ ನೀಡುತ್ತಿರುವ ಅನುದಾನ ಅಲ್ಪವಾಗಿದ್ದು, ಆಂತರಿಕ ಆದಾಯದ ಕೊರತೆಯಿಂದ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ತುರ್ತಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು, ಮುಂಬರುವ ಬಜೆಟ್‌ನಲ್ಲಿ ಪ್ರತ್ಯೇಕ ವೇತನ ಅನುದಾನ ಕಲ್ಪಿಸಬೇಕು ಹಾಗೂ ಕಲ್ಯಾಣ ಕರ್ನಾಟಕ ಭಾಗದ ನಿಯಮಾವಳಿಯನ್ವಯ ಖಾಲಿ ಇರುವ ಬೋಧಕೇತರ ಹುದ್ದೆಗಳಿಗೆ ತಾತ್ಕಾಲಿಕ ಸಿಬ್ಬಂದಿಯನ್ನು ಖಾಯಂಗೊಳಿಸಬೇಕೆAದು ನೌಕರರ ವೃಂದ ಸರ್ಕಾರಕ್ಕೆ ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರಾದ ಡಾ.ತಿಮ್ಮಣ್ಣ ಭೀಮರಾಯ, ಡಾ.ಕೃಷ್ಣೆಗೌಡ, ಸಿದ್ರಾಮೇಶ್, ವಿರೂಪಾಕ್ಷಪ್ಪ ಇಟಗಿ, ತಾತ್ಕಾಲಿಕ ಆಡಳಿತ ಸಿಬ್ಬಂದಿಗಳಾದ ಡಾ.ಎ.ನಾಗವೇಣಿ, ಶ್ರೀನಿವಾಸ ಕೆ.ಕಲಾಲ್, ಜೆ.ಬಸವರಾಜ, ಜೆ.ಶಿವಕುಮಾರ, ಬಿ.ಗಂಗಾಧರ, ಮಹ್ಮದ್‌ಶಫಿ, ನಂದಿನಿ, ಕೆ.ಪಂಪಾಪತಿ, ಕೆ.ವೀರೇಶ, ಸಂತೋಷ, ರವಿಕುಮಾರ, ಶ್ರೀಕಾಂತ ಚೌಟಿಗಿ, ಡಾ. ರೇವಣ್ಣಸಿದ್ಧಪ್ಪ, ದೊಡ್ಡ ಹನುಮಂತಪ್ಪ, ರಾಮಮೂರ್ತಿ ಇತರರಿದ್ದರು.