ಹೊಸಪೇಟೆಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಡಿಎಚ್‌ಒ ಶಂಕರ್‌ನಾಯ್ಕ, ಡಿವೈಎಸ್ಪಿ ಡಾ.ಟಿ.ಮಂಜುನಾಥ ಇತರರಿದ್ದರು.
- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಭಿಪ್ರಾಯ
ಹೊಸಪೇಟೆ: ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಚಿಕಿತ್ಸೆ ಪಡೆದು ನಿಶ್ಚಿಂತೆಯಿAದ ಬದುಕು ಸಾಗಿಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದ್ದಾರೆ.
ವಿಜಯನಗರ ಜಿಲ್ಲಾ ವಾಲ್ಮೀಕಿ ನಾಯಕ ಸೇವಾನಿರತ ಮತ್ತು ನಿವೃತ್ತ ನೌಕರರ ಸಂಘದಿAದ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಬದುಕಿನ ಕೆಲಸ ಕಾರ್ಯಗಳ ಒತ್ತಡದಲ್ಲಿ ನಮಗರಿವಿಲ್ಲದೆಯೇ ಅನೇಕ ರೋಗಗಳು ನಮ್ಮ ದೇಹವನ್ನು ಸೇರಿಕೊಳ್ಳುತ್ತವೆ. ನಮ್ಮ ದೇಹ ದೈವದತ್ತವಾಗಿ ಬಂದಿದೆ. ಅಂತಹ ದೇಹವನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಬೇಕು. ದೇಹಕ್ಕೆ ಒಗ್ಗುವಂತಹ ಆಹಾರವನ್ನೇ ಉಪಯೋಗಿಸಬೇಕು ಎಂದು ಕರೆ ನೀಡಿದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಪ್ರತಿಯೊಬ್ಬ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ದೇಹದಲ್ಲಿರುವ ಏರು ಪೇರುಗಳನ್ನು ಸರಿಪಡಿಸಿಕೊಂಡರೆ ಸುಂದರವಾದ, ಆರೋಗ್ಯ ಪೂರ್ಣವಾದ ಬದುಕನ್ನು ಸಾಗಿ ಶತ ವರ್ಷಗಳ ಕಾಲ ನಿರಾತಂಕವಾಗಿ ಬದುಕಿನ ಬಂಡಿಯಲ್ಲಿ ಸಾಗಬಹುದು. ಕಾಯಿಲೆಗಳು ಬರುವ ಮುನ್ನವೇ ಎಚ್ಚರ ವಹಿಸಿ ವೈದ್ಯರ ಸಲಹೆ ಮೇರೆಗೆ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದರೆ ಎಂತಹ ಕಾಯಿಲೆಯನ್ನಾದರೂ ತಡೆಗಟ್ಟಬಹುದು ಎಂದರು.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಹೃದಯ ರೋಗ ತಜ್ಞರು ಸೇರಿದಂತೆ 16 ವೈದ್ಯರು ಶಿಬಿರದಲ್ಲಿ ಭಾಗವಹಿಸಿದರು. 726ಕ್ಕೂ ಅಧಿಕ ಜನರು ತಪಾಸಣೆ ಮಾಡಿಸಿಕೊಂಡರು.
ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಡಿಎಚ್ ಒ ಶಂಕರ್ ನಾಯ್ಕ, ಡಿವೈಎಸ್ಪಿ ಡಾ.ಟಿ.ಮಂಜುನಾಥ, ಪ್ರಮುಖರಾದ ಕಡ್ಲಬಾಳ್ ಪನ್ನಂಗಧರ್, ಗೊಸಲಬರಮಪ್ಪ, ಬಿಸಾಟಿ ತಾಯಪ್ಪ, ಬಂಡೆರ ಹನುಮಪ್ಪ, ಬಿ.ಎಸ್.ಜಂಬಯ್ಯನಾಯಕ, ನಾಣಿಕೇರಿ ಕನಕಪ್ಪ, ಕಂಪ್ಲಿ ಕಣಿವೆಪ್ಪ ಇತರರಿದ್ದರು.