ಹೊಸಪೇಟೆ ತಾಲೂಕಿನ ಬಸವನದುರ್ಗದಲ್ಲಿ ರಾಷ್ಟ್ರೀಯ ಅರೋಗ್ಯ ಕಾರ್ಯ ಜನಜಾಗೃತಿಯ ಬೀದಿ ನಾಟಕ ತಂಡಕ್ಕೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಧರ್ಮನಗೌಡ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಗ್ರಾಪ ಮಾಜಿ ಅಧ್ಯಕ್ಷ ದುರಗಪ್ಪ, ಕಲಾವಿದ ಗುಂಡಿ ರಮೇಶ್ ಇತರರಿದ್ದರು. 
ವಿಜಯನಗರ

ಬೀದಿ ನಾಟಕದಿಂದ ಆರೋಗ್ಯ ಜಾಗೃತಿ

ಹೊಸಪೇಟೆ: ತಾಲೂಕಿನ ನಾಗೇನಹಳ್ಳಿಯ ಬಳಿಯ ಬಸವನದುರ್ಗದಲ್ಲಿ ರಾಷ್ಟ್ರೀಯ ಅರೋಗ್ಯ ಕಾರ್ಯ ಕ್ರಮಗಳನ್ನು ಜನಜಾಗೃತಿ ಮೂಡಿಸುವ ಬೀದಿ ನಾಟಕ ತಂಡಕ್ಕೆ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಧರ್ಮನಗೌಡ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಗುಂಡಿ ರಮೇಶ್ ಕಲಾ ಟ್ರಸ್ಟ್ನಿಂದ ಕಲಾ ಪ್ರದರ್ಶನ ನೀಡಲಾಯಿತು. ಪ್ರದರ್ಶನದಲ್ಲಿ ಲಿಂಗ ಸಮಾನತೆಯ ಬಗ್ಗೆ ಮತ್ತು ಲಸಿಕೆಗೆ ಮತ್ತು ಕಾಲರ ನಿಯಂತ್ರಣ ಸ್ವಚ್ಚತೆಯಿಂದ ಅರೋಗ್ಯ ಜೀವನ ನೆಡೆಸುವ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಬಗ್ಗೆ ಮಾಹಿತಿ ನೀಡಲಾಯಿತು.