ಚಿಕ್ಕಜೊಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ 3 ಕೋಟಿ ರೂ. ವೆಚ್ಚದ ನೂತನ ವಸತಿಗೃಹಗಳನ್ನು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಉದ್ಘಾಟಿಸಿದರು. ಜಗಳೂರು ಶಾಸಕ ದೇವೇಂದ್ರಪ್ಪ, ಎಇಇ ಬಸವಾರೆಡ್ಡಿ, ಕುರಿಹಟ್ಟಿ ಬೋಸಣ್ಣ, ಎನ್.ಟಿ. ತಮ್ಮಣ್ಣ, ಹುಡೇಂ ಪಾಪನಾಯಕ, ತಳವಾರ ಶರಣಪ್ಪ ಇದ್ದರು. 
ವಿಜಯನಗರ

ಆರೋಗ್ಯ ಕೇಂದ್ರ ಕಟ್ಟಡ ದುರಸ್ತಿಗೆ ಕ್ರಮ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿಕೆ
  • 3 ಕೋಟಿ ರೂ. ವೆಚ್ಚದ ವಸತಿಗೃಹಗಳ ಉದ್ಘಾಟನೆ

ಕಾನಹೊಸಹಳ್ಳಿ:

ಆರು ದಶಗಳಿಂದ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಚಿಕ್ಕಜೋಗಿಹಳ್ಳಿ ಆಸ್ಪತ್ರೆ ಕಟ್ಟಡ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.

ಕಾನಹೊಸಹಳ್ಳಿ ಸಮೀಪದ ಚಿಕ್ಕಜೊಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ 3 ಕೋಟಿ ರೂ. ವೆಚ್ಚದ ನೂತನ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು. ವಿಶಾಲ ಜಾಗ ಒಳಗೊಂಡ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದ್ದು ದುರಸ್ತಿಗೆ ಕ್ರಮ ವಹಿಸಲಾಗುವುದು. ಹೊಸ ಎಕ್ಸರೇ ಯಂತ್ರ ಖರೀದಿಸಿ ಸ್ಥಾಪಿಸಲಾಗಿದ್ದು, ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಸದ್ಯ ವೈದ್ಯರಿಗೆ ಒಂದು, ಸಿಬ್ಬಂದಿ 8 ವಸತಿಗೃಹ ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೂ ವಸತಿಗೃಹ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಜಗಳೂರು ಶಾಸಕ ದೇವೇಂದ್ರಪ್ಪ, ಕಾಂಗ್ರೆಸ್ ಮುಖಂಡ ಎನ್.ಟಿ. ತಮ್ಮಣ್ಣ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಉಪಾಧ್ಯಕ್ಷ ಮಹಾದೇವಪ್ಪ, ಬಣವಿಕಲ್ಲು ಎರ‌್ರಿಸ್ವಾಮಿ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ, ಜಿ.ಪಿ.ಗುರುಲಿಂಗಪ್ಪ, ಪೂಜಾರಿ ಪ್ರಕಾಶ್, ಕುರಿಹಟ್ಟಿ ಜಿ.ಓಬಣ್ಣ, ಮಹಮ್ಮದ್ ಹನೀಫ್, ಪಿಡಬ್ಲುೃಡಿ ಎಇಇ ಬಸವಾರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶನಾಯ್ಕ, ಡಿ.ಎಂ. ಜಯಕುಮಾರ್, ಫಸಲು ಪಾಲಯ್ಯ, ಬುಡಾರೆಡ್ಡಿ, ಕೆ.ಟಿ.ರಾಜಣ್ಣ, ರಹಮತ್, ಧನುಂಜಯ, ಗ್ರಾಪಂ ಕಾರ್ಯದರ್ಶಿ ಯು.ಎಂ. ಪ್ರಕಾಶ, ವೈದ್ಯರಾದ ಧರ್ಮಸಿಂಗ್, ಕರಿಬಸವೇಶ್ವರಸ್ವಾಮಿ, ಕಿಶನ್‌ಕುಮಾರ್, ಗುತ್ತಿಗೆದಾರ ಜಿ.ಪಿ.ಆಶೋಕ ಇದ್ದರು.
"

ನಕಲಿ ಔಷಧ ಪೂರೈಕೆ ಕಂಪನಿಗಳು ರಾಜ್ಯದಲ್ಲಿ ಹೆಚ್ಚಾಗಿದ್ದು, ಇವುಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಸದನದಲ್ಲಿ ಒತ್ತಾಯಿಸಿರುವೆ. ವೈದ್ಯರು ಸರ್ಕಾರ ಪೂರೈಸುವ ಗುಣಮಟ್ಟದ ಔಷಧಗಳ್ನು ರೋಗಿಗಳಿಗೆ ವಿತರಿಸಬೇಕು ಹಾಗೂ ಹೊರಗಡೆ ಚೀಟಿ ಬರೆಯಬಾರದು.

— ಡಾ.ಎನ್.ಟಿ. ಶ್ರೀನಿವಾಸ್ ಶಾಸಕರು, ಕೂಡ್ಲಿಗಿ