Vijayanagara Foundation Day 
ವಿಜಯನಗರ

ವಿಜಯನಗರ ಸಂಸ್ಥಾಪನಾ ದಿನ ಸರ್ಕಾರ ಆಚರಿಸಲಿ

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಒತ್ತಾಯ
ಹೊಸಪೇಟೆ: ಮ್ಯಾಸ ಮಂಡಲ ,ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ , ಹಂಪಿ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದಿಂದ ಐತಿಹಾಸಿ ತಾಣ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ಶನಿವಾರ 690ನೇ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಿಸಲಾಯಿತು.
ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಮಾತನಾಡಿ, ವೀರ ಕಂಪಿಲರಾಯ, ಗಂಡುಗಲಿ ಕುಮಾರರಾಮರ ಆಡಳಿತದ ಮುಂದುವರಿದ ಭಾಗವೇ ಸಂಗಮ ಮನೆತನದ ಹರಿಹರ, ಬುಕ್ಕರಾಯರ ಆಡಳಿತ. ಕ್ರಿ.ಶ 1336ರಲ್ಲಿ ಆನೆಗೊಂದಿಯಲ್ಲಿ ಕುಮಾರರಾಮನ ಕನಸಿನ ಯೋಜನೆಯಂತೆ ಇವರು ಆಳ್ವಿಕೆ ನಡೆಸಿ ನಾಡು, ನುಡಿ, ಧರ್ಮ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದಾರೆ. ಇವರನ್ನೇ ಅನುಸರಿಸಿದ ಸಾಳುವ, ತುಳುವ, ಅರವೀಡು ಮನೆತನಗಳು ಸುಭದ್ರ ಮತ್ತು ಸುಸ್ಥಿರವಾದ ಸಾಮ್ರಾಜ್ಯದ ಆಡಳಿತ ನಡೆಸಿದ್ದಾರೆ. ರಾಜ್ಯ ಸರ್ಕಾರ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಿಸಬೇಕು. ಹಾಗೂ ಹಂಪಿಯಲ್ಲಿ ಕೃಷ್ಣದೇವರಾಯರ ಕಂಚಿನ ಪುತ್ತಳಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.