ಆ್ಯಕ್ಸಲ್ ಬ್ಲೇಡ್ ಕಟ್ ಆಗಿದ್ದರಿಂದ ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಿಗೇರಿ ಕ್ರಾಸ್ ಬಳಿ ಸರ್ಕಾರಿ ಬಸ್ ಕಂದಕದಲ್ಲಿ ವಾಲಿರುವುದು. 
ವಿಜಯನಗರ

ರಸ್ತೆ ಬದಿ ಗುಂಡಿಗಿಳಿದ ಸರ್ಕಾರಿ ಬಸ್

ಹಗರಿಬೊಮ್ಮನಹಳ್ಳಿ: ಹೂವಿನಹಡಗಲಿಯಿಂದ ಪಟ್ಟಣಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಆ್ಯಕ್ಸಲ್ ಬ್ಲೇಡ್ ಮೋರಿಗೇರಿ ಕ್ರಾಸ್ ಬಳಿ ಮಂಗಳವಾರ ತುಂಡರಿಸಿದ್ದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ತಗ್ಗು ಪ್ರದೇಶಕ್ಕೆ ಇಳಿದಿದೆ.
ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಹೂವಿನ ಹಡಗಲಿ ಡಿಪೋಗೆ ಸೇರಿದ ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರಿದ್ದರು. ಕೆಲ ಪ್ರಯಾಣಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಘಟಕದ ಸಾರಿಗೆ ನಿರೀಕ್ಷಕ ಸಂತೋಷ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.