ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೃದ್ರೋಗ ತಜ್ಞ ನಾಗರಾಜ್ ರೋಗಿಗಳನ್ನು ಪರೀಕ್ಷಿಸಿದರು.  
ವಿಜಯನಗರ

ಕ್ಯಾನ್ಸರ್ ತಡೆಗೆ ಉತ್ತಮ ಜೀವನಶೈಲಿ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಹೃದ್ರೋಗ ತಜ್ಞ ನಾಗರಾಜ್ ಹೇಳಿಕೆ
  • ಸಿರಗುಪ್ಪ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಿರಗುಪ್ಪ: ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೃದ್ರೋಗ ತಜ್ಞ ನಾಗರಾಜ್ ಹೇಳಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಜಿಪಂ, ಆರೋಗ್ಯ ಇಲಾಖೆ, ಅಸಾಂಕ್ರಾಮಿಕ ರೋಗಗಳ ಸರ್ವೇಕ್ಷಣಾ ಘಟಕ, ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಕ್ಯಾನ್ಸರ್ ರೋಗ ಜಾಗತಿಕವಾಗಿ ಬೆಳೆಯುತ್ತಲೇ ಇದ್ದು, ಕುಟುಂಬ, ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆ ಮೇಲೆ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಒತ್ತಡ ಉಂಟುಮಾಡುತ್ತಿದೆ. ಕ್ಯಾನ್ಸರ್ ತಡೆಗಟ್ಟಲು ಆರೋಗ್ಯಕರ ಜೀವನಶೈಲಿ, ತಂಬಾಕು-ಮದ್ಯ ತ್ಯಜಿಸಬೇಕು. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಆರಂಭಿಕ ತಪಾಸಣೆ ಮುಖ್ಯವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಅವಶ್ಯವಿದೆ ಎಂದರು.
ಕ್ಯಾನ್ಸರ್ ತಡೆಗಟ್ಟುವುದು, ಆರಂಭದಲ್ಲೇ ರೋಗ ಪತ್ತೆ ಹಚ್ಚುವುದು ಹಾಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಮುಂತಾದವುಗಳ ಕುರಿತು ಜಾಗೃತಿ ಮೂಡಿಸಲಾಯಿತು.ವೈದ್ಯ ಮಲ್ಲಿಕಾರ್ಜುನ್ ರೆಡ್ಡಿ, ತರಬೇತಿ ವೈದ್ಯೆ ಹರ್ಷಿತಾ, ಆಸ್ಪತ್ರೆ ಸಿಬ್ಬಂದಿ ಮುರ್ಗಮ್ಮ, ಮಲ್ಲೇಶಪ್ಪ, ಶಿವಕುಮಾರ್, ನಗ್ಮಾ ಇದ್ದರು.