ಹೊಸಪೇಟೆ ಕಂಚುಗಾರಪೇಟೆಯಲ್ಲಿ ಭಾನುವಾರ ಕಾಳಿಕಾದೇವಿ ನೂತನ ದೇಗುಲದಲ್ಲಿ ಕಳಸಾರೋಹಣ ಜರುಗಿತು. ಕಳಸ ದೇಣಿಗೆ ನೀಡಿದ ಸಹೋದರರಾದ ಶಿಲ್ಪಿ ಕೆ.ಗುಂಡಾಚಾರ್ಯ, ಶ್ರೀನಿವಾಸ ಆಚಾರ್ಯ ಇತರರಿದ್ದರು.
ಹೊಸಪೇಟೆ: ನಗರದ ಕಂಚುಗಾರಪೇಟೆಯಲ್ಲಿ ಕಾಳಿಕಾದೇವಿ ನೂತನ ದೇಗುಲಕ್ಕೆ ಚಿನ್ನಲೇಪಿತ ಕಳಸಾರೋಹಣ ಭಾನುವಾರ ಜರುಗಿತು.
ಆಂಧ್ರ ಪ್ರದೇಶದ ಆದೋನಿ ಮೂಲದ ಸಹೋದರರಾದ ಶಿಲ್ಪಿ ಕೆ.ಗುಂಡಾಚಾರ್ಯ, ಶ್ರೀನಿವಾಸ ಆಚಾರ್ಯ ಅವರು ಅಂದಾಜು 06 ಲಕ್ಷ ರೂ. ಮೌಲ್ಯದ ಕಳಸ ದೇಣಿಗೆಯಾಗಿ ಅರ್ಪಣೆ ಮಾಡಿದರು.
ನಗರದ ಕಂಚುಗಾರಪೇಟೆಯಲ್ಲಿ ಜೀರ್ಣೋದ್ಧಾರ ಮಾಡಿದ ಕಾಳಿಕಾದೇವಿ ದೇಗುಲವನ್ನು ಕಾಳಿಕಾದೇವಿ ಮೂರ್ತಿಗೆ ವಿವಿಧ ಯಾಗ, ಅಭಿಷೇಕ ಮಾಡಿಸುವ ಮೂಲಕ ವಿಶೇಷ ಪೂಜಾ ಕೈಂಕರ್ಯಗಳನ್ನ ಪೂರೈಸಿ ಕಾಳಿಕಾದೇವಿ ದೇಗುಲವನ್ನು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಲಾಯಿತು.