ಹೊಸಪೇಟೆ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಎಲ್‌ಎ -2 ಕಾರ್ಯಗಾರವನ್ನು ಮಾಜಿ ಸಚಿವ ಬಿ.ಶ್ರೀರಾಮಲು ಉದ್ಘಾಟಿಸಿದರು. ಮಾಜಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಇತರರಿದ್ದರು. 
ವಿಜಯನಗರ

ಮಧ್ಯಾಂತರ ಚುನಾವಣೆಗೆ ಸಿದ್ದರಾಗಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಶ್ರೀರಾಮುಲು ಕರೆ
ಹೊಸಪೇಟೆ: ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ ಪರಿಷ್ಕರಣೆ ನಡೆಯಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕಳೆದ 2.5 ವರ್ಷದಲ್ಲಿ ಕಳೆದರೂ, ಶೂನ್ಯ ಸಾಧನೆಯಲ್ಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮಲು ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಶನಿವಾರ ಬಿಎಲ್‌ಎ -2 ಕಾರ್ಯಗಾರ, ಮಂಡಲ ನೂತನ ಮೋರ್ಚಾ ಹಾಗೂ ಮಹಾಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಕೇವಲ ಹಗರಣದಲ್ಲಿ ಕಾಲ ಕಳೆಯುತ್ತದೆ. ಗ್ಯಾರಂಟಿ ಯೋಜನೆ ನಂತರ ಅಗತ್ಯ ವಸ್ತುಗಳು ಸೇರಿ ಇತರೆ ಕ್ಷೇತ್ರಗಳಲ್ಲಿ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ಬಡವರು, ಸಾಮಾನ್ಯ ಜನರು ಜೀವನ ನಡೆಸುವುದೇ ದುಸ್ಥರವಾಗಿದೆ. ಕೊಲೆ, ದರೋಡೆ, ಸುಲಿಗೆ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕುರ್ಚಿ ಕದನದಲ್ಲಿ ಕಾಲಹರಣ ಮಾಡುತ್ತಿದೆ. ಸದ್ಯ ರಾಜ್ಯ ಸರ್ಕಾರ ವೆಂಟಿಲೇಶನ್ ನಲ್ಲಿದೆ. ಯಾವಗ ಮಧ್ಯಾಂತರ ಚುಮಾವಣೆ ನಡೆಯಬಹುದು. ಬಿಜೆಪಿ ಕಾರ್ಯಕರ್ತರು ಸಿದ್ಧತೆ ನಡೆಸಬೇಕಿದೆ ಎಂದರು.
ಮಾಜಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಚುನಾವಣಾ ಅಕ್ರಮದಿಂದ ಅಧಿಕಾರಕ್ಕೆ ಬರುತ್ತಿತ್ತು. 12 ರಾಜ್ಯಗಳಲ್ಲಿ ಮತಪಟ್ಟಿ ಪರಿಷ್ಕರಣೆ ಆಗಿದ ನಂತರ ಬಿಹಾರದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೂಡ ಮತಪಟ್ಟಿ ಪರಿಷ್ಕರಣೆ ನಡೆಯಲಿದೆ. ಇದಕ್ಕೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರು ಸಹಕಾರ ನೀಡಬೇಕು. ನಿಮ್ಮ ಭಾಗದ ಮತಗಟ್ಟೆಗಳಲ್ಲಿ ಸೂಕ್ಷ್ಮವಾಗಿ ಬಿಎಲ್ ಎ-2ಗಳು ಪರಿಶೀಲಿಸಬೇಕು. ಅಕ್ರಮ ನಡೆದಂತೆ ಎಚ್ಚರ ವಹಿಸಬೇಕು. ಮುಂದಿನ ಚುನಾವಣೆಗೆ ತಳಮಟ್ಟದಿಂದ ಸಂಘಟನೆಯಾಗಬೇಕು ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಅಧ್ಯಕ್ಷ ಸಂಜೀವ್ ರೆಡ್ಡಿ, ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಚಡಿ ಕೊಟ್ರೇಶ್, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರಮುಖರಾದ ಅಶೋಕ್ ಜೀರೆ, ಸಂದೀಪ್ ಸಿಂಗ್, ಬಲ್ಲಾಹುಣಸಿ ರಾಮಣ್ಣ, ಮಧುರಚೆನ್ನಶಾಸ್ತ್ರಿ ಇತರರಿದ್ದರು.