ಹೊಸಪೇಟೆಯಲ್ಲಿ ಟಾಕ್ಸಿಗಳು ನಿಂತಿರುವುದು
- ಟ್ರಾವೆಲರ್ ಗಳಿಗೆ ಆನ್ಲೈನ್ ವಂಚನೆ
- ಪ್ರವಾಸಕ್ಕೆ ಕಾರ್ ಬುಕ್ ಮಾಡುವ ನೆಪದಲ್ಲಿ ಖದೀಮರು
- ಬ್ಯಾಂಕ್ ಮೆಸೇಜ್ ನಂತೆ ಸಂದೇಶ ಹಾಕಿ ಮೋಸ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ನಮಗೆ ಕಾರ್, ರೂಮ್, ಹೊಟೇಲ್ ಬೇಕು ಎಂದು ವ್ಯವಹರಿಸುವ ನೆಪದಲ್ಲಿ ಕದೀಮರು ಪ್ರವಾಸಿ ತಾಣಗಳನ್ನು ನೆಚ್ಚಿಕೊಂಡಿರುವ ಟ್ರಾವೆಲರ್ ಸೇರಿದಂತೆ ಹೊಟೇಲ್ ಉದ್ಯಮಿಗಳಿಗೆ ವಿನೂತನವಾಗಿ ಆನ್ಲೈನ್ ವಂಚನೆ ಮಾಡುವ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ.
ವಿಶ್ವವಿಖ್ಯಾತ ಹಂಪಿ, ಬಾದಾಮಿ, ಮೈಸೂರು, ಚಿತ್ರದುರ್ಗ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಕಡೆಯ ಪ್ರವಾಸಿ ಟ್ರಾವೆಲರ್ ಹಾಗೂ ಹೊಟೇಲ್ ಉದ್ಯಮಿಗಳಿಗೆ ಖದೀಮರು ವಂಚನೆ ಮಾಡುತ್ತಿದ್ದಾರೆ. ಪ್ರವಾಸ ಮಾಡಲು ನಮಗೆ ಕಾರು ಬೇಕಿದೆ. ಜತೆಗೆ ಉಳಿಯಲು ಹೊಟೇಲ್ ಬೇಕು, ದಿನಕ್ಕೆ ಏಷ್ಟು ಪಾವತಿ ಮಾಡಬೇಕು ಎಂದು ವಿಚಾರಣೆ ಮಾಡುತ್ತಾರೆ. ನಂತರ ಮುಂಗಡ ಹಣ ಎಷ್ಟು ಹಾಕಬೇಕೆ ಎಂದು ಕೇಳುತ್ತಾರೆ.
ಟ್ರಾವೆಲರ್ ಗಳ ನಂಬರ್ ಪಡೆದು ಸಾವಿರ ರೂ. ಮುಂಗಡ ಹಣ ಹಾಕುವ ಬದಲು 10 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ಹಣ ಹೋಗಿರುವ ಬ್ಯಾಂಕ್ ಮೆಸೇಜ್ ನಂತೆ ಟ್ರಾವೆಲರ್‌ಗಳ ಮೊಬೈಲ್ ನಂಬರ್ ಗೆ ಸಂದೇಶ ಹಾಕಿ ನಂಬಿಸುತ್ತಾರೆ. ಮುಂಗಡ ಹಣ ಕೈ ತಪ್ಪಿ ಹೆಚ್ಚಿನ ಹಣ ಹಾಕಿರುವೆ. ಒಂದು ಸಾವಿರ ರೂ. ತಗೆದುಕೊಂಡು ಉಳಿದ ಹಣ ಹಾಕುವಂತೆ ನಂಬುವAತೆ ಹೇಳುತ್ತಾರೆ. ವ್ಯವಹಾರ ಕುದುರಿಸು ಭರದಲ್ಲಿ ಹಣವನ್ನು ವಾಪಸ್ ಹಾಕಿ ಟ್ರಾವೆಲರ್, ಹೊಟೇಲ್ ಉದ್ಯಮಿಗಳು ವಂಚನೆಗೆ ಒಳಗಾದ ಪ್ರಕರಣಗಳು ಬೆಳಕಿಗೆ ಬಂದಿವೆ.
ಫೋನ್‌ಗೆ ಬರುವ ಅಥವಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದಾಗ, ಯುಪಿಐ, ಒಟಿಪಿ ಖಾತೆ ವಿವರಗಳನ್ನು ಹೇಳುವ ಮೂಲಕ ಜನರು ಆನ್ ಲೈನ್ ವಂಚನೆಗೆ ಒಳಗಾಗುವುದು ಸಾಮಾನ್ಯವಾಗಿದೆ. ಇನ್ನು ಕೆಲ ವಂಚಕರು ಶೇರ್ ಮಾರ್ಕೆಟ್, ಬಿಜಿನೆಸ್ ಸಾಲ, ಲಕ್ಕಿ ಡ್ರಾ, ಕೆರಿಯರ್ ಕಂಪನಿಗಳ ಹೆಸರಿನಲ್ಲಿ ಕೋಟಿಗಟ್ಟಲೆ ವಂಚನೆ ಪ್ರಕರಣಗಳು ಆಗಾಗ್ಗೆ ನಡೆಯುತ್ತೇಲೆ ಇರುತ್ತದೆ. ಇದರಿಂದ ಬಹುತೇಕರು ಜಾಗೃತರಾಗಿದ್ದು, ವಂಚನೆ ಪ್ರಕರಣಗಳು ಕಡಿಮೆ ಆಗಿವೆ. ಆದರೆ, ಹೊಸದೊಂದು ದಾರಿ ಹುಡಿಕಿಕೊಂಡಿರುವ ಆನ್ಲೈನ್ ಕದೀಮರು ಪ್ರವಾಸಿ ತಾಣಗಳ ಉದ್ಯಮಿಗಳಿಗೆ ವಂಚನೆ ಮಾಡುತ್ತಿದ್ದಾರೆ.
ಸಾರ್ವಜನಿಕರು ಜಾಗೃತರಾಗಲಿ
ವಂಚಕರು ವ್ಯವಹರಿಸುವಾಗ ಬಹುತೇಕ ಬೆರೆಯವರ ಮೊಬೈಲ್ ನಂಬರ್ ಇರುತ್ತದೆ. ಆದ್ದರಿಂದ ವಂಚಕರು ಮೊಬೈಲ್ ಪೋನ್ ನಲ್ಲಿ ಚಾಟಿಂಕ್ ಮಾತ್ರ ಮಾಡುತ್ತಾರೆ. ಆದರೆ, ವಾಟ್ಸ್ ಆಪ್ ಕರೆ ಹೊರತು ಪಡಿಸಿ ಸಾಮಾನ್ಯ ಕರೆ ಮಾಡಲ್ಲ, ಸ್ವೀಕರಿಸಲ್ಲ. ಸಾಮಾನ್ಯ ಕರೆಗಳಿಂದ ಧ್ವನಿ ರೆಕಾರ್ಡ್ ಮಾಡಬಹುದು ವಾಟ್ಸ್ ಆಪ್ ನಲ್ಲಿ ಕಾಲ್ ರೆಕಾರ್ಡ್ ಆಗಲ್ಲ. ಟ್ರೂ ಕಾಲರ್ ನಲ್ಲಿ ಅಮಿತ್ ಎಂದು ಹೆಸರು ಇದೆ. ಆದರೆ, ಯುಪಿಐ ನಲ್ಲಿ ಮುಸ್ತಫಾ ಎಂದು ಹೆಸರಿದೆ .ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಬಹುತೇಕ ಅನ್ಯರ ಮೊಬೈಲ್ ನಂಬರ್ ಬಳಸುತ್ತಾರೆ. ಇದರಿಂದ ಪೊಲೀಸ್ ದೂರು ಬಂದಾಗ ತಪ್ಪುಸಿಕೊಳ್ಳು ಬಹುದು. ಆದ್ದರಿಂದ ಸಾರ್ವಜನಿಕರು ಜಾಗೃತರಾಗಬೇಕು ಎಂದು ಪೊಲೀಸ್ ಅಧಿಕಾರಿಗಳ ತಿಳಿಸಿದರು.
ಟ್ರಾವೆಲರ್, ಹೊಟೇಲ್ ಉದ್ಯಮಿಗಳಿಗೆ ಆನ್ ಲೈನ್ ನಲ್ಲಿ ವಂಚನೆ ಮಾಡಿರುವ ಯಾವುದೇ ದೂರು ಬಂದಿಲ್ಲ. ಅಧಿಕಾರಿಗಳಿಗೆ ಪರಿಶೀಲನೆ ಮಾಡಲು ಸೂಚನೆ ನೀಡಲಾಗುತ್ತದೆ. ದೂರು ಬಂದರೆ, ಕ್ರಮಕೈಗೊಳ್ಳುತ್ತೇವೆ. ಆದರೂ, ಸಾರ್ವಜನಿಕರು ಜಾಗೃತರಾಗಬೇಕು.
ಹಂಪಿ ಪ್ರವಾಸಕ್ಕೆ ಎರಡು ದಿನ ಕಾರ್ ಬೇಕು ಎಂದು ಒಬ್ಬರು ವಾಟ್ಸ್ ಆಪ್ ಕಾಲ್ ಮಾಡಿದರು. 10 ಸಾವಿರ ರೂ. ಕೈ ತಪ್ಪಿ ಹಾಕಿರುವೆ, ಮುಂಗಡ ಒಂದು ಸಾವಿರ ಪಡೆದು ಉಳಿದ ಹಣ ವಾಪಸ್ ಮಾಡಿ ಎಂದು ವಾಟ್ಸ್ ಆಪ್ ಕಾಲ್ ಮಾಡಿದರು. ಹಣ ಕಳಿಸಿರುವ ಬ್ಯಾಂಕ್ ಮೆಸೇಜ್ ನಂತೆ ಸಂದೇಶ ಕಳಿಸಿದರು. ಗ್ರಹಕರು ಎಂದು ನಂಬಿ ವಾಪಸ್ ಹಣ ಹಾಕಿ ವಂಚನೆಗೆ ಒಳಗಾದೆ. ಇಲ್ಲಿ ಮಾತ್ರವಲ್ಲ ಬಹುತೇಕ ಕಡೆ ಇದೆ ರೀತಿ ವಂಚನೆಗೆ ಒಳಗಾಗಿದ್ದಾರೆ.