ಸುಗ್ಗೇನಹಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಮೌಲಾಲಿ ತಾತ ಸೇರಿ ನಾನಾ ಪೀರಲು ದೇವರು.
- ಮೌಲಾಲಿ ತಾತನ ಕಾರ್ಣಿಕ
- ಕಂಪ್ಲಿ ಮೊಹರಂ ಕತಲ್ ರಾತ್ರಿ
ಕಂಪ್ಲಿ: ತಾಲೂಕಿನಲ್ಲಿ ಮೊಹರಂ ಕತಲ್‌ರಾತ್ರಿ ನಿಮಿತ್ತ ಅಲಾಯಿ ಕುಣಿಯಲ್ಲಿ ಅಗ್ನಿ ಹಾಯುವ ಕಾರ್ಯಕ್ರಮ ಗುರುವಾರ ತಡರಾತ್ರಿ ನಡೆದವು. ಸುಗ್ಗೇನಹಳ್ಳಿ ಗ್ರಾಮದ ಮೊಹರಂ ಹಬ್ಬದ ಕತಲ್‌ರಾತ್ರಿ ಆಚರಣೆಯಲ್ಲಿ ಮೌಲಾಲಿ ತಾತ ನಾಲ್ಕು ಪಾಸೇವು(ಕಾರ್ಣಿಕ)ನುಡಿಗಳನ್ನು ನುಡಿದಿದ್ದು, ರೈತಾಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಲಾಯಿಕುಣಿ ಹಾಯುವಾಗ ಮೌಲಾಲಿತಾತನ ಕುದುರೆ ಹಿಡಿದಿದ್ದ ರಫಿಕ್ ತಾತನು ಬಾಲ ಮಕ್ಕಳಿಗೆ ‘ಬಲತ್ಕಾರ ಕಡಿಮೆ ಆಯಿತು’ ಎಂದು ನುಡಿದಿದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ನರಮಾನವನ ಅಹಂಕಾರದಿಂದ ಭೂಮಿ ತಾಯಿ ಬಾಯಿ ತೆಗೆದಳು ಎನ್ನುವುದಕ್ಕೆ ಮಾನವನ ಹಸ್ತಕ್ಷೇಪದಿಂದ ಪರಿಸರ ಮುನಿಸಿ ಮಳೆ, ಬೆಳೆ ಕಡಿಮೆ ಆಗುವುದೆಂದು, ಮಳೆ ಬೆಳೆ, ನುಡಿಗೆ ನ್ಯಾಯ ನೀತಿಯಿಂದ ನಡೆದುಕೊಂಡವರಿಗೆ ದೈವ ಕೈಹಿಡಿಯುತ್ತದೆ. ಕೆಂಪು ಕುದುರೆ ಬಿಳಿ ಕುದುರೆ ಹಿಂದಕ್ಕೆ ಮುಂದಕ್ಕೆ ಹೋಗಿ ಗಗನಕ್ಕೆ ಹಾಯಿತು ಎನ್ನುವುದಕ್ಕೆ ಅಕ್ಕಿ, ಹತ್ತಿ, ಮೆಣಸಿನಕಾಯಿ ದರ ಏರಿಕೆ ಸಾಧ್ಯತೆ ಇದೆ ಎನ್ನುವ ಮಾತುಗಳು ರೈತಾಪಿ ವರ್ಗದಲ್ಲಿ ಕೇಳಿ ಬಂದವು.