ಕೂಡ್ಲಿಗಿಯಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಗುಡೇಕೋಟೆ ಠಾಣೆ ಹೆಡ್ ಕಾನ್‌ಸ್ಟೇಬಲ್ ಸ್ವರೂಪ್ ಕೊಟ್ಟೂರು ಮಾತನಾಡಿದರು. ವಕೀಲರಾದ ಟಿ. ಮಲ್ಲಿಕಾರ್ಜುನ, ಕೆ.ಎಚ್.ಎಂ.ಶೈಲಜಾ, ಕೆ.ಲಕ್ಷ್ಮೀ, ಪ್ರಾಚಾರ್ಯ ಬಿ.ಎಂ.ಸಿದ್ದೇಶ್ ಇತರರಿದ್ದರು.
- ಹೆಡ್ ಕಾನ್‌ಸ್ಟೇಬಲ್ ಸ್ವರೂಪ್ ಕೊಟ್ಟೂರು ಸಲಹೆ
- ಕೂಡ್ಲಿಗಿ ರಸ್ತೆ ಸುರಕ್ಷತಾ ಮಾಸಾಚರಣೆ
ಕೂಡ್ಲಿಗಿ: ರಸ್ತೆ ಸುರಕ್ಷತಾ ನಿಯಮಗಳು ಇರುವುದೇ ಜನರ ಸುರಕ್ಷತೆಗಾಗಿ ಎಂದು ಗುಡೇಕೋಟೆ ಠಾಣೆ ಹೆಡ್ ಕಾನ್‌ಸ್ಟೇಬಲ್ ಸ್ವರೂಪ್ ಕೊಟ್ಟೂರು ಹೇಳಿದರು.
ಪಟ್ಟಣದ ಶ್ರೀ ರೇಣುಕಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 37 ನೇ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಿಂದಲೇ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಿದ್ದು, ಸಾವಿರಾರು ಮಂದಿ ಗಾಯಗೊಳ್ಳುತ್ತಿದ್ದಾರೆ. ಅಪಘಾತಗಳಿಂದ ಜೀವ, ಜೀವನ ಎರಡಕ್ಕೂ ಹಾನಿಯಾಗಲಿದೆ. ನಮ್ಮಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಅರಿವಿನ ಕೊರತೆ ಮತ್ತು ಅವುಗಳ ಪಾಲನೆಯಲ್ಲಿ ದಿವ್ಯ ನಿರ್ಲಕ್ಷ್ಯ ತಾಳಿರುವುದು ಇದಕ್ಕೆಲ್ಲ ಕಾರಣ. ಹೀಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರು ಅರಿತು ಪಾಲಿಸಬೇಕು ಎಂದರು.
ವಕೀಲರಾದ ಟಿ.ಮಲ್ಲಿಕಾರ್ಜುನ, ಕೆ.ಎಚ್.ಎಂ ಶೈಲಜಾ, ಕೆ.ಲಕ್ಷ್ಮೀ, ವಕೀಲರ ಸಂಘದ ಸಹ ಕಾರ್ಯದರ್ಶಿ ಡಿ.ಎಚ್.ದುರುಗೇಶ್, ಎಎಸ್‌ಐ ಪಕ್ಕೀರಮ್ಮ, ಪ್ರಾಚಾರ್ಯ ಬಿ.ಎಂ ಸಿದ್ದೇಶ್, ಮುಖ್ಯಶಿಕ್ಷಕ ಹಾಮೇಶ್ ಪೂಜಾರ್, ಶಿಕ್ಷಕರಾದ ಮಹೇಶ್, ಶ್ರುತಿ, ಅಶ್ವಿನಿ, ಗೌರಮ್ಮ ಇತರರಿದ್ದರು.