ಹಗರಿಬೊಮ್ಮನಹಳ್ಳಿ ಹಳೇ ಊರಿನ ಸ.ಮಾ.ಹಿ.ಪ್ರಾ.ಶಾಲೆಯ ಕೊಠಡಿಯಲ್ಲಿ ಬೆಂಕಿ ತಗುಲಿ ಹಳೇ ಪುಸ್ತಕಗಳು, ಪರಿಕರಗಳು ಸುಟ್ಟಿರುವುದು.  
ವಿಜಯನಗರ

ಶಾಲೆ ಕೊಠಡಿಯಲ್ಲಿ ಬೆಂಕಿ ಅವಘಡ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ಪಟ್ಟಣದ ಹಳೇ ಊರಿನ ಸ.ಮಾ.ಹಿ.ಪ್ರಾ.ಶಾಲೆ ಕೊಠಡಿಯಲ್ಲಿ ಸೋಮವಾರ ಬೆಂಕಿ ಅವಘಡದಿಂದ ಹಳೇ ಪುಸ್ತಕಗಳು ಮತ್ತು ಪರಿಕರಗಳು ಸುಟ್ಟಿವೆ.
ಮೊದಲ ಸೆಮಿಸ್ಟರ್ ಪುಸ್ತಕಗಳನ್ನು ಮಕ್ಕಳಿಂದ ಪಡೆದು ಕೊಠಡಿಯಲ್ಲಿ ಇರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಬೇಕಾಗಿದ್ದ ಬಟ್ಟೆ, ಮಾನಿಟರ್, ಪ್ರಾಜೆಕ್ಟರ್, ಸ್ಪೀಕರ್‌ಗಳಿದ್ದವು. ಸ್ಥಳಕ್ಕೆ ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಬಸವರಾಜ ಅಡವಿಬಾವಿ, ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ, ಸದಸ್ಯ ದೀಪಕ್ ಸಾ ಕಠಾರೆ. ಪ್ರಭಾರ ಬಿಇಒ ಎಂ.ಪ್ರಭಾಕರ, ಮುಖ್ಯಶಿಕ್ಷಕ ವೀರನಗೌಡ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೀರೇಶ ಮಜ್ಗಿ ಪರಿಶೀಲಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಇಒ ಎಂ.ಪ್ರಭಾಕರ, ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು. ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.