ಮಲಪನಗುಡಿಗೆ ಆಗಮಿಸಿದ ರೈತರ ಪಾದಯಾತ್ರೆ 
ವಿಜಯನಗರ

ಜಲಾಶಯಕ್ಕೆ ತಲುಪಲಿದೆ ರೈತರ ಪಾದಯಾತ್ರೆ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಬೆಳೆಗೆ ನೀರು ಬಿಡುವಂತೆ ಆಗ್ರಹ
  • ಮಲಪನಗುಡಿಗೆ ತಲುಪಿದ ಪಾದಯಾತ್ರೆ
ಹೊಸಪೇಟೆ: ತುಂಗಭದ್ರಾ ನದಿಪಾತ್ರದ ಜಿಲ್ಲೆಗಳಲ್ಲಿ ಎರಡನೇ ಬೆಳೆಗೆ ನೀರು ಬಿಡುವಂತೆ ಆಗ್ರಹಿಸಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕರೂರು ಗ್ರಾಮದಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಡೆಸಿದ ಪಾದಯಾತ್ರೆ ತಾಲೂಕಿನ ಮಲಪನಗುಡಿಗೆ ಸೋಮವಾರ ತಲುಪಿದೆ.
ಬಳ್ಳಾರಿ ತಾಲೂಕಿನ ಕಂಪ್ಲಿ ಮಾರ್ಗವಾಗಿ ಆಗಮಿಸಿದ ರೈತರ ಪಾದಯಾತ್ರೆ, ತಾಲೂಕಿನ ಕಮಲಾಪುರನಲ್ಲಿ ವಾಸ್ತವ್ಯ ಮಾಡಿ ರೈತರ ಸಭೆ ನಡೆಸಿತು. ಬೆಳಗ್ಗೆ 10ಕ್ಕೆ ಮಲಪನಗುಡಿ ತಲುಪಿತು. ನಗರದ ತುಂಗಭದ್ರಾ ಜಲಾಶಯಕ್ಕೆ ಮಧ್ಯಾಹ್ನ ತಲುಪಲಿದೆ.
ತುಂಗಭದ್ರಾ ಜಲಾಶಯದಿಂದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರ ಎರಡನೇ ಬೆಳೆಗೆ ನೀರು ಪೂರೈಸಬೇಕು ಹಾಗೂ ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳನ್ನು ಜೂನ್ ಅಂತ್ಯದೊಳಗೆ ಅಳವಡಿಸಬೇಕು ಎಂದು ಒತ್ತಾಯಿಸಿ ತುಂಗಭದ್ರಾ ಜಲಾಶಯದ ವರೆಗೆ ಪಾದಯಾತ್ರೆ ನಡೆಸಿದ್ದಾರೆ.
ರಾಜ್ಯ ರೈತಸಂಘದ ಅಧ್ಯಕ್ಷ ಕರೂರು ಆರ್.ಮಾಧವ ರೆಡ್ಡಿ, ಪ್ರಮುಖರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕಾಳಿದಾಸ್ ಸೇರಿದಂತೆ ಹಲವು ರೈತರು ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ.