ಕರಡಿ 
ವಿಜಯನಗರ

ಮತ್ತೆ ಕರಡಿ ದಾಳಿ ರೈತನಿಗೆ ಗಾಯ

ಮಂಜುನಾಥ
ಹೊಸಪೇಟೆ: ತಾಲೂಕಿನ ಬುಕ್ಕಸಾಗರ ಗ್ರಾಮದ ಬಳಿ ಬುಧವಾರ ಸಂಜೆ ಕರಡಿಯೊಂದು ರೈತ ಸಿ.ರಾಜಶೇಖರ ಗೌಡ ಮೇಲೆ ದಾಳಿ ನಡೆಸಿದ್ದು, ಕೈ ಕಾಲಿಗೆ ತೀವ್ರ ಗಾಯವಾಗಳಾಗಿವೆ.
ರೈತ ತನ್ನ ಕಬ್ಬಿನ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕರಡಿ ಅವರ ಮೇಲೆ ದಾಳಿ ನಡೆಸಿದೆ. ರಾಜಶೇಖರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಕ್ಕಸಾಗರ ಸಮೀಪದ ವೆಂಕಟಾಪುರ ಬಳಿ ಈಚೆಗೆ ಕರಡಿಯೊಂದು ರಾಯಪ್ಪ ಎಂಬುವವರ ಮೇಲೂ ದಾಳಿ ನಡೆಸಿತ್ತು. ಈ ಘಟನೆ ಮರೆಯುವ ಮೊದಲೇ ಮತ್ತೊಂದು ಕರಡಿ ದಾಳಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕಿದೆ ಎಂದು ಸ್ಥಳೀಯರ ಆಗ್ರವಾಗಿದೆ.