ಕನ್ನಡ ವಿವಿಯ ನಾಟಕ ವಿಭಾಗದಿಂದ ಬುದವಾರ ಪಂಪ ಸಭಾಂಗಣದಲ್ಲಿ ನಡೆದ ಸಮಕಾಲಿನ ಕನ್ನಡರಂಗಭೂಮಿಯ ಸವಾಲುಗಳು ಎಂಬ ಕಾರ್ಯಕ್ರಮದಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಬಳ್ಳಾರಿಯ ರಂಗಕರ್ಮಿ ಶ್ರೀ ಕೆ. ಜಗದೀಶ್, ನಾಟಕ ವಿಭಾಗದ ಮುಖ್ಯಸ್ಥಡಾ. ವೀರೇಶ ಬಡಿಗೇರಇತರರಿದ್ದರು. 
ವಿಜಯನಗರ

ಆಧುನಿಕತೆಯಲ್ಲಿ ಸೋರಗುತ್ತಿದೆ ಬಯಲಾಟ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯ
ಹೊಸಪೇಟೆ: ಆಧುನಿಕ ಕಾಲಕ್ಕೆ ಅನುಗುಣವಾಗಿ ಹವ್ಯಾಸಿ ರಂಗಭೂಮಿ ಬಂದ ಮೇಲೆ ಇದರ ಪ್ರಮುಖಉದ್ದೇಶ ಹಣದ ಸಂಪಾದನೆಯಾಗಿರುವುದರಿAದಇದರಜತೆಗೆ ವೃತ್ತಿರಂಗಭೂಮಿ ಹೊಂದಾಣಿಕೆ ಮಾಡಿಕೊಂಡಿತು. ಆಧುನಿಕತಂತ್ರಜ್ಞಾನ ಬಂದ ಹಾಗೆ ಎಲ್ಲಾ ಕಲೆಗಳು ಸಹ ಪಲ್ಲಟವಾಗಿರುವುದನ್ನು
ನಾವು ಕಾಣುತ್ತೇವೆಎಂದುಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ವಿಶ್ವರಂಗಭೂಮಿ ದಿನಾಚರಣೆ ನಿಮಿತ್ಯಕನ್ನಡ ವಿವಿಯ ನಾಟಕ ವಿಭಾಗದಿಂದ ಬುದವಾರ ಪಂಪ ಸಭಾಂಗಣದಲ್ಲಿ ನಡೆದ ಸಮಕಾಲಿನ ಕನ್ನಡರಂಗಭೂಮಿಯ ಸವಾಲುಗಳು ಎಂಬ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದುಕಾಲದಲ್ಲಿ ನಾಡಿನದೊಡ್ಡ ಸಮೂಹ ಸಂವಹನ ಕಲೆಯಾಗಿದ್ದ ನಾಟಕದ ಸ್ಥಾನವನ್ನು ಸಿನಿಮಾ ಆಕ್ರಮಿಸಿಕೊಂಡಿತು. ಇದರಜತೆಗೆ ಸೆಣಸಾಡುತ್ತಾ ಹೊಂದಾಣಿಕೆ ಮಾಡಿಕೊಂಡುರAಗಭೂಮಿತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು. ತಲೆಮಾರುಗಳಿಂದ ಬಂದಜಾನಪದಗೀತೆ ಪರಂಪರೆಇAದು ಕೇಳಲು ಅಸಾಧ್ಯವಾಗುವರೀತಿಯಲ್ಲಿರಚನೆಯಾಗುತ್ತಿರುವುದನ್ನುಕಾಣುತ್ತೇವೆ. ಯಕ್ಷಗಾನ ಕಲೆಗೆ ಸಿಗುವ ಗೌರವ, ಭಕ್ತಿ ಬಯಲಾಟಕ್ಕೆ ಸಿಗುತ್ತಿಲ್ಲ. ಯಕ್ಷಗಾನ ವೃದ್ಧಿಯಾಗುತ್ತಿದೆ ಬಯಲಾಟ ಸ್ವರಗುತ್ತಿದೆ. ಹಾಗೆಯೇ ಬಯಲಾಟದಲ್ಲಿಅತಿಹೆಚ್ಚುಕಲಾವಿದರಿದ್ದಾರೆ. ಅವರಿಗೆ ಸೂಕ್ತ ರೀತಿಯಲ್ಲಿತರಬೇತಿ ನೀಡಬೇಕುಎಂದರು.
ಬಳ್ಳಾರಿಯ ರಂಗಭೂಮಿಕಲಾವಿದೆಕೊಟ್ನೇಕಲ್‌ರAಗಮ್ಮ ಮಾತನಾಡಿ, ಕಲೆಯನ್ನುವುದುಎಲ್ಲರಿಗೂಒಲಿಯುವುದಿಲ್ಲ. ಸುದೀರ್ಘವಾದಅಭ್ಯಾಸ ಮುಖ್ಯ. ಗುರುಗಳು ಹೇಳಿದ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ನಡೆದರೆ ವಿದ್ಯಾರ್ಥಿಗಳ ಮುಂದಿನ ಜೀವನ ಬಂಗಾರವಾಗುತ್ತದೆ. ಸಾಧನೆ ಮೌನದಿಂದಲೇ ಶುರುವಾಗಬೇಕು, ನಮ್ಮದಲ್ಲದ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಗುರುಗಳು ಹೇಳಿದ ಒಳ್ಳೆಯ ವಿಚಾರಗಳನ್ನು ಅರಿತು ಮುನ್ನಡೆಯಬೇಕುಎಂದರು.