ತುಂಗಭದ್ರಾ ಜಲಾಶಯಕ್ಕೆ ವಿಜಯವಾಡದ ಸೆಂಟ್ರಲ್‌ ಡಿಸೈನ್ ಆರ್ಗನೈಸೇಷನ್‌ನ ತಜ್ಞರರಾದ ಆರ್.ಆರ್.ವಿಜಯ ಸಾರಥಿ, ಕೆ.ಕೃಷ್ಣ ರಾವ್‌ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಟಿಬಿಡ್ಯಾಂ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಎಸ್ ಇ ನಾರಾಯಣ್ ನಾಯ್ಕ, ಇಇ ಎನ್.ಚಂದ್ರಶೇಖರ್, ಪ್ರವೀಣ್ ಕುಮಾರ್ ರೆಡ್ಡಿ, ಜಿ.ಕಿರಣ್ ಇತರರಿದ್ದರು. 
ವಿಜಯನಗರ

ತುಂಗಭದ್ರಾ ಕ್ರೆಸ್ಟ್‌ಗೇಟ್‌ಗಳ ಪರಿಶೀಲನೆಗೆ ತಜ್ಞರ ಬೇಟಿ

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಿರುವ ನೂತನ ಕ್ರಸ್ಟ್ಗೇಟ್ಗಳ ಗುಣಮಟ್ಟ ಹಾಗೂ ಅಳವಡಿಕೆ ಕಾರ್ಯವನ್ನು ವಿಜಯವಾಡದ ಸೆಂಟ್ರಲ್ಡಿಸೈನ್ ಆರ್ಗನೈಸೇಷನ್ (ಸಿಡಿಒ) ತಜ್ಞರ ತಂಡ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಡಿಒದ ಇಇಗಳಾದ ಆರ್.ಆರ್.ವಿಜಯಸಾರಥಿ ಮತ್ತು ಕೆ.ಕೃಷ್ಣ ರಾವ್ಅವರು ಕಾಮಗಾರಿ ಪರಿಶೀಲಿಸಿದರು. ಗೇಟ್ ಹಾಗೂ ಚೈನ್ಗಳ ಅಳವಡಿಕೆಯು ಯೋಜನೆಯ ನಿಯಮಾವಳಿಗಳಂತೆಯೇ ನಡೆದಿದೆ ಎಂದು ಅವರು ಧೃಡೀಕರಿಸಿದ್ದಾರೆ.2024 .19ನೇ ಕ್ರೆಸ್ಟ್ಗೇಟ್ ಕೊಚ್ಚಿಹೋದ ಬಳಿಕ, ಮೂಲ ರಚನೆಗೆ ಧಕ್ಕೆ ಬಾರದಂತೆ ಎಲ್ಲಾ ಗೇಟ್ಗಳನ್ನು ಬದಲಿಸಲು ತಜ್ಞರ ತಂಡವೇ ಸರ್ಕಾರಕ್ಕೆ ಸಲಹೆ ನೀಡಿತ್ತು.

ತಜ್ಞರ ಭೇಟಿಯ ವೇಳೆ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ .ಆರ್.ಕೆ.ರೆಡ್ಡಿ, ಎಇ ನಾರಾಯಣ ನಾಯ್ಕ ಜಲಾಶಯ ಗೇಟ್ ಗಳ ಸ್ಥಿತಿ ಗತಿ ತಿಳಿಸಿದರು. ಮಧ್ಯೆ, ಈಗಾಗಲೇ 20 ಗೇಟ್ಗಳಿಗೆ ಹೊಸ ಚೈನ್ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು,ಜೂನ್‌ 20ರೊಳಗೆ ಜಲಾಶಯದ ಗೇಟ್ಗಳಿಗೂ ಚೈನ್ಅಳವಡಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಮಂಡಳಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.