- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ/ ಇಂದಿನಿAದ ಸ್ವಯಂ ಗಣತಿ ಪ್ರಕ್ರಿಯೆ ಆರಂಭ
ಹೊಸಪೇಟೆ: ಭಾರತ ಜನಗಣತಿ 2027ರ ನಿಮಿತ್ತ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ ಸ್ವಯಂ ಗಣತಿ ಪ್ರಕ್ರಿಯೆಯು ಏ.01 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಸಾರ್ವಜನಿಕರು ಏ.01 ರಿಂದ 15 ರವರೆಗೆ ಇಲಾಖೆಯ ವಬ್‌ಸೈಟ್ ತಿತಿತಿ.se.ಛಿeಟಿsus.gov.iಟಿ ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಲಭ್ಯವಾಗುವ ರೆಫರೆನ್ಸ್ ಐಡಿ ಅನ್ನು ಸಾರ್ವಜನಿಕರು
ಸುರಕ್ಷಿತವಾಗಿಟ್ಟುಕೊಳಬೇಕು. ಬಳಿಕ ಏ.16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಗಾಗಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ. ಮೊದಲ ಹಂತದ ನಂತರ ಜನಸಂಖ್ಯಾ ಗಣತಿಯ ಪ್ರಕ್ರಿಯೆ ಆರಂಭವಾಗಲಿದೆ. ಜನಗಣತಿಯಿಂದ ದೊರೆಯುವ ದತ್ತಾಂಶವು ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪಿಸುವಿಕೆಗೆ ಪೂರಕವಾಗಿರುತ್ತದೆ. ಆದ್ದರಿಂದ, ಎಲ್ಲಾ ನಾಗರಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.