ಹೊಸಪೇಟೆಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಬುಧವಾರಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ ಕೃಷಿ ಪರಿಕರಗಳ ವಿತರಣೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ಗುಲ್ಬರ್ಗಾ ವಿಚಕ್ಷಣಾ ವಿಭಾಗದಜಂಟಿ ನಿರ್ದೇಶಕ ಶಿವಕುಮಾರ್ ಇದ್ದರು. 
ವಿಜಯನಗರ

ಮುಂಗಾರಿಗೆ ಕೃಷಿ ಪರಿಕರಗಳ ಕೊರತೆಯಾಗದಂತೆ ನಿಗಾವಹಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ ಕೃಷಿ ಅಧಿಕಾರಿಗಳಿಗೆ ಸೂಚನೆ
ಹೊಸಪೇಟೆ: ಈ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ನಿಟ್ಟಿನಲ್ಲಿಜಿಲ್ಲೆಯರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆಅಗತ್ಯ ಕೃಷಿ ಪರಿಕರಗಳ ಕೊರತೆಯಾಗದಂತೆ ಸಕಾಲದಲ್ಲಿ ಪೂರೈಸಬೇಕುಎಂದುಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿ ತಿಳಿಸಿದರು.
ನಗರದಜಿಲ್ಲಾಧಿಕಾರಿಕಚೇರಿ ಸಭಾಂಗಣದಲ್ಲಿ ಬುಧವಾರಆಯೋಜಿಸಲಾದ ಕೃಷಿ ಪರಿಕರಗಳ ವಿತರಣೆ ಪ್ರಗತಿ ಪರಿಶೀಲನಾ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಎಲ್ಲಾರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಸಹಕಾರ ಸಂಘಗಳಲ್ಲಿ ರೈತರ ಬೇಡಿಕೆಗೆಅನುಗುಣವಾಗಿ ಬಿತ್ತನೆ ಬೀಜ ಮತ್ತುರಸಗೊಬ್ಬರವನ್ನು ಮುನ್ನೆಚ್ಚರಿಕೆಯಾಗಿದಾಸ್ತಾನು ಮಾಡಿಕೊಳ್ಳಬೇಕು. ವಿತರಣಾ ಸಮಯದಲ್ಲಿಯಾವುದೇಗೊಂದಲ ಉಂಟಾಗದAತೆಕ್ರಮವಹಿಸಬೇಕು ಎಂದರು.
ರೈತರಿಗೆ ವಿತರಿಸುವ ಬಿತ್ತನೆ ಬೀಜಗಳು ಉತ್ತಮಗುಣಮಟ್ಟದ್ದಾಗಿರಬೇಕು. ಮಾರುಕಟ್ಟೆಯಲ್ಲಿ ನಕಲಿ ಬೀಜಅಥವಾ ಕಳಪೆ ರಸಗೊಬ್ಬರ ಮಾರಾಟವಾಗದಂತೆತಡೆಯಲು ವಿಶೇಷಜಾಗೃತ ದಳ ರಚಿಸಿ ನಿರಂತರವಾಗಿ ದಾಳಿ ನಡೆಸಬೇಕು. ಯಾವುದೇ ಖಾಸಗಿ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚಿನದರ ವಸೂಲಿ ಮಾಡಿದರೆಅಂತಹ ಮಳಿಗೆಗಳ ಪರವಾನಗಿ ರದ್ದುಗೊಳಿಸಲಾಗುವುದು. ರೈತರು ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ರೈತರಿಗೆಕಾಣುವಂತೆದಾಸ್ತಾನು ಫಲಕ ಪ್ರದರ್ಶಿಸಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕ್ಷೇತ್ರ ಮಟ್ಟದಲ್ಲಿ ಸಂಚರಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಿತ್ತನೆ ಸಮಯದಲ್ಲಿತಾಂತ್ರಿಕ ಸಲಹೆ ಮತ್ತು ಹವಾಮಾನ ಮುನ್ಸೂಚನೆಕುರಿತುರೈತರಿಗೆ ಸಲಹೆ ಸೂಚನೆ ನೀಡಬೇಕುಎಂದು ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿಒಟ್ಟು 2.78 ಲಕ್ಷ ಹೆಕ್ಟೇರ್ ಕೃಷಿ ಜಮೀನುಇದೆ. ಪ್ರಸ್ತುತ 1.33 ಟನ್‌ರಸಗೊಬ್ಬರದ ಬೇಡಿಕೆಯಿದೆ. ಸದ್ಯಕ್ಕೆರಸಗೊಬ್ಬರ ಪೂರೈಕೆಯಲ್ಲಿಯಾವುದೇಕೊರತೆಯಿಲ್ಲ. ಜೂನ್, ಜುಲೈ ಮತ್ತುಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಬೇಡಿಕೆಇರಲಿದ್ದು, ಆ ಸಮಯಕ್ಕೆ ಪೂರೈಕೆ ಮಾಡಲುಅಗತ್ಯಗುರಿ ಹೊಂದಲಾಗಿದೆಎAದರು.