ಹಗರಿಬೊಮ್ಮನಹಳ್ಳಿಯಲ್ಲಿ ಎಸ್‌ಐಆರ್ ವಿರೋಧಿ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಪ್ರತಿಭಟನೆಯ ಕರಪತ್ರಗಳನ್ನು ಒಕ್ಕೂಟದ ಸಂಚಾಲಕ ಹುರುಕಡ್ಲಿ ಶಿವಕುಮಾರ ಬಿಡುಗಡೆಗೊಳಿಸಿದರು.
ಹಗರಿಬೊಮ್ಮನಹಳ್ಳಿ: ಎಸ್‌ಐಆರ್ ವಿರೋಧೀಸಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದಿಂದ ಜೂ.17 ರಾಜ್ಯಾದ್ಯಂತ ಜನಜಾಗೃತಿ ಜಾಥಾ ಹಾಗೂ ಜೂ.20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜನಪರ ಸಂಘಟನೆ ಒಕ್ಕೂಟದ ಸಂಚಾಲಕ ಹುರುಕಡ್ಡಿ ಶಿವಕುಮಾರ ತಿಳಿಸಿದರು.
ಪಟ್ಟಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿ, ಮೇ30ರಂದು ರಾಜ್ಯದ 80ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ಹನಸಿ ದೇವರಾಜ್, ಬೀದಿಬದಿಯ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಯು.ಮಂಜುನಾಥ್, ರಾಜ್ಯ ರೈತ ಸಂಘ ಯುವ ಘಟಕದ ಜಿಲ್ಲಾ ಅಧ್ಯಕ್ಷ ರವಿ ತಂಬ್ರಹಳ್ಳಿ, ರೋಷನ್, ಹುಸೇನ್, ಕೆ.ಆರ್.ಎಸ್.ಗಣೇಶ್ ಹರಕುಣಿ, ಅಮೀನುದ್ದೀನ್, ಜಯಸೂರ್ಯ ಎ.ನಾಗರಾಜ್, ಇರ್ಫಾನ್ ಪಠಾಣ್, ಡಿ.ಎಂ.ಪೂಜಾರ್ ರಾಜಭಕ್ಷಿ, ಅನಂತ, ಪ್ರಶಾಂತ ಹತ್ತಿ, ಕೆ.ಶಾಬುದ್ದೀನ್ ಇತರರಿದ್ದರು.