ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.  
ವಿಜಯನಗರ

ಅಜ್ಞಾನ ದೂರ ಮಾಡಲು ಶ್ರಮ

ಅಶೋಕ್ ಕುಮಾರ್ ಎನ್
ಕೂಡ್ಲಿಗಿ: ಸೇವಾಲಾಲ್ ಗೋಪಾಲಕರಾಗಿ ಜೀವನದ ಅನುಭವ ಹಾಗೂ ತತ್ವಗಳ ಮೂಲಕ ಜನರಲ್ಲಿನ ಅಜ್ಞಾನವನ್ನು ದೂರ ಮಾಡಿದರು ಎಂದು ತಾಪಂ ಇಒ ನರಸಪ್ಪ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂತ ಸೇವಲಾಲ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸತ್ಯ, ಅಹಿಂಸೆ, ದಯೆ, ಕರುಣೆ ಪಾಲಿಸುವ ಮೂಲಕ ಧರ್ಮಾತೀತರಾಗಿ ಎಂದು ಸಾರಿದರು. ಮಾನವ ಜನ್ಮಪವಿತ್ರವಾಗಿದ್ದು, ಅದನ್ನು ಹಾಳು ಮಾಡಿಕೊಳ್ಳದಿರಿ. ವ್ಯಸನಗಳಿಂದ ದೂರವಿರಿ. ಅರಿಷ್ವರ್ಡಗಳನ್ನು ಸುಟ್ಟು ಹಾಕಿ ಪ್ರಾಮಾಣಿಕರಾಗಿ ಜೀವಿಸಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿರಿ. ಎಲ್ಲರೂ ಅಕ್ಷರ ಜ್ಞಾನ ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಸೇವಾಲಾಲ್ ಮಹಾರಾಜರು ತಿಳಿಸಿದರು ಎಂದರು.
ಸೇವಾಲಾಲ ಮಹಾರಾಜರು ಜ್ಞಾನದ ಮೂಲಕ ಮುಕ್ತಿಮಾರ್ಗ ತೋರಿಸಿದರು. ಸಮ ಸಮಾಜದ ನಿರ್ಮಾಣ ಹಾಗೂ ಸಹೋದರತ್ವ ಭಾವನೆ ಮೂಡಲು ಪ್ರೇರೇಪಿಸಿದರು. ಜನರ ಕಷ್ಟಗಳಿಗಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿದ್ದರು. ಇಂತಹ ಮಹಾನ್ ಸಂತ ನಮ್ಮ ನಾಡಿನಲ್ಲಿ ನೆಲೆಸಿದ್ದರು ಎಂಬುದೇ ನಮಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಶಿಕ್ಷಣ ಸಮನ್ವಯಾಧಿಕಾರಿ ಎಸ್.ಎಸ್.ಜಗದೀಶ್, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ವಾಸುದೇವ ನಾಯ್ಕ, ಕಾರ್ಯದರ್ಶಿ ಪ್ರಕಾಶ್ ನಾಯ್ಕ, ಕೆಪಿಸಿಸಿ ಸದಸ್ಯೆ ಚಂಪಾ ಚೌಹಾಣ್, ನಿವೃತ್ತ ಡಿವೈಎಸ್ಪಿ ಸವಿಶಂಕರ ನಾಯ್ಕ, ಬಾಸೂ ನಾಯ್ಕ, ಪೂರ್ಯಾ ನಾಯ್ಕ, ಎಲ್.ಪವಿತ್ರಾ, ಬಾಲಾಜಿ ನಾಯ್ಕ, ಮಂಜೇಶ್ ಕುಮಾರ್, ತುಳುಜಾ ನಾಯ್ಕ, ಭಾಸ್ಕರ ನಾಯ್ಕ, ರವಿ ನಾಯ್ಕ, ಶ್ರೀನಿವಾಸ್, ಕೆಇಬಿ ಚಂದ್ರು, ಕಾಟ್ರಳ್ಳಿ ಬಸವರಾಜ ಇದ್ದರು.